ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸೂಲಿಬೆಲೆ: ಅರೆ ಸೇನಾಪಡೆ ಪಥ ಸಂಚಲನೆ

Rashmi Kasaragodu
Updated On : 6 Apr 2013, 1:10 am

ಸೂಲಿಬೆಲೆ: ಮೇ.5ರಂದು ನಡೆಯುವ ವಿಧಾನಸಭಾ ಚುನಾವಣಿ ಅಂಗವಾಗಿ ಸೂಲಿಬೆಲೆಯ ಹೋಬಳಿಯ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಶನಿವಾರ ಅರೆ ಸೇನೆ ಪಡೆ ಪಥ ಸಂಚಲನೆ ನಡೆಸಿತು.
ಮುಕ್ತ ಮತ್ತು ನ್ಯಾಯ ಸಮ್ಮತ ಮತದಾನಕ್ಕೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಜಾಗೃತಿ ಮೂಡಿಸಿದರು. ಅಲ್ಲದೆ, ಸೂಕ್ಷ್ಮ ಗ್ರಾಮಗಳಲ್ಲಿ ರಾಜಕೀಯ ಪಕ್ಷದ ಮುಖಂಡರನ್ನು ಕರೆಯಿಸಿ ಗಲಾಟೆ ಇತ್ಯಾದಿ ಅಹಿತಕರ ಘಟನೆಗಳಿಗೆ ಕಾರಣರಾಗದಂತೆ ಎಚ್ಚರಿಕೆ ನೀಡಿದ್ದು ವಿಶೇಷವಾಗಿತ್ತು. ಸೂಲಿಬೆಲೆ ಪಟ್ಟಣದಲ್ಲಿ ಸುಮಾರು 2 ತುಕಡಿಯ ಸೇನೆ ಪಡೆಯ ಪೊಲೀಸರು ಡಿ.ಕ್ರಾಸ್, ಕುರುಬರನೆಟ್ಟು, ವಾಲ್ಮೀಕಿನಗರ, ಜನತಾ ಕಾಲೋನಿ, ಹೊಸ ಬಸ್ ನಿಲ್ದಾಣ ಸೇರಿದಂತೆ ಮುಖ್ಯ ರಸ್ತೆಗಳಲ್ಲಿ ಸಂಚರಿಸಿದರು. ಇದಕ್ಕೂ ಮುನ್ನ ಅರಸನಹಳ್ಳಿ ಗ್ರಾಮದಲ್ಲಿ ಪಥ ಸಂಚಲನೆ ಮಾಡಿ ಎರಡು ರಾಜಕೀಯ ಪಕ್ಷಗಳಲ್ಲಿ ಬೆಂಬಲಿಗರಾಗಿ ಜಿದ್ದಾಜಿದ್ದಿ ಸಾಧಿಸುತ್ತಿರುವ ಮುಖಂಡರನ್ನು ಕರೆದು ಮುಂದೆ ನಡೆಯಯವ ಚುನಾವಣೆಯಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು. ಅಹಿತಕರ ಘಟನೆಗಳಿಗೆ ಬೆಂಬಲಿಗರನ್ನು ಪ್ರಚೋದನೆ ಮಾಡಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತಂದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement