ಹೊಸಪೇಟೆಯಲ್ಲಿ 6 ಲಕ್ಷ ಸ್ವಾಧೀನ
ಹೊಸಪೇಟೆ: ಅಧಿಕೃತ ದಾಖಲೆಗಳಿಲ್ಲದೆ ಕಾರೊಂದರಲ್ಲಿ 6 ಲಕ್ಷ ಸಾಗಿಸುತ್ತಿದ್ದ ಹಣವನ್ನು ತಾಲೂಕಿನ ಮಲಪನಗುಡಿ ಸಮೀಪದ ಚೆಕ್ಪೋಸ್ಟ್ ಬಳಿ ತಪಾಸಣೆ ನಡೆಸಿ ಹೊಸಪೇಟೆ ಗ್ರಾಮೀಣ ಪೊಲೀಸರು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗೋನ್ವಾರ ಗ್ರಾಮದಿಂದ ಗಫೂರ್ಸಾಬ್ ತಾತ ಅವರು ಹೊಸ ಕಾರು ಖರೀದಿಗಾಗಿ ಹೊಸಪೇಟೆ ನಗರಕ್ಕೆ ಕಾರ್ನಲ್ಲಿ ಬರುವಾಗ ಚೆಕ್ ಪೋಸ್ಟ್ನಲ್ಲಿ ಪೊಲೀಸರು ಶೋಧಿಸಿದ್ದಾರೆ.
ಆಗ ಈ ಹಣ ಪತ್ತೆಯಾಗಿದ್ದು, ಇದಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಪೊಲೀಸರು ತೋರಿಸಿ ಎಂದಾಗ ದಾಖಲೆಗಳಿಲ್ಲದ ಕಾರಣ ಹಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.