ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶಾಸಕ ಬಾಲಕೃಷ್ಣ ದರ್ಪ, ದೌರ್ಜನ್ಯ ಮಟ್ಟ ಹಾಕುವುದೇ ಕಾಂಗ್ರೆಸ್ ಗುರಿ

Rashmi Kasaragodu
Updated On : 7 Apr 2013, 12:31 pm

ಮಾಗಡಿ: ಕ್ಷೇತ್ರದ ಶಾಸಕ ಎಚ್.ಸಿ. ಬಾಲಕೃಷ್ಣ  ಮತ್ತು ಅವರ  ಹಿಂಬಾಲಕರ  ದರ್ಪ, ದೌರ್ಜನ್ಯವನ್ನು ಮಟ್ಟ ಹಾಕುವುದೇ ಕಾಂಗ್ರೆಸ್  ಗುರಿ ಎಂದು ಕೆಪಿಸಿಸ ಸದಸ್ಯ ಎ. ಮಂಜು ಜೆಡಿಎಸ್ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದರು.
   ಅವರು ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಚುನಾವಣೆ ಬಂದಾಗ ದಲಿತರ, ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ಪರ ಮಾರುದ್ದ ಭಾಷಣ ಮಾಡುವ ಕಲೆಯನ್ನು ಶಾಸಕ ಎಚ್.ಸಿ. ಬಾಲಕೃಷ್ಣ  ಅವರು ಕರಗತ ಮಾಡಿಕೊಂಡಿದ್ದಾರೆ. ಕಾರ್ಯಕರ್ತರ ಸಭೆ ಹೆಸರಿನಲ್ಲಿ ಕಾಂಗ್ರೆಸ್ಸಿಗರ ವಿರುದ್ಧ ಅಪಪ್ರಚಾರದಲ್ಲಿ ತೊಡಗಿರುವ ಬಾಲಕೃಷ್ಣ ಅವರಿಗೆ, ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರೇ ಮುಂಬರುವ ಚುನಾವಣೆಯಲ್ಲಿ ಬುದ್ಧಿ ಕಲಿಸುತ್ತಾರೆ. ಕ್ಷೇತ್ರದಲ್ಲಿನ ಬಹುಕೋಟಿ ಹಗರಣ ಹಣದಿಂದ ಚುನಾವಣೆ ಎದುರಿಸಲು ಸಜ್ಜಾಗಿರುವ ಶಾಸಕರಿಗೆ  ಕ್ಷೇತ್ರದ ಪ್ರಜ್ಞಾವಂತ ಮತದಾರರು ಈ ಬಾರಿ ತಕ್ಕ ಪಾಠ ಕಲಿಸುತ್ತಾರೆ.
ಅಧಿಕಾರ ಇದ್ದಾಗ ನೀರಾವರಿ ಯೋಜನೆ ಬಗ್ಗೆ ಚಿಂತಿಸದ ಶಾಸಕರು, ಈಗ  ಕ್ಷೇತ್ರಕ್ಕೆ  ನೀರಾವರಿ ಯೋಜನೆ ತರುವುದಾಗಿ  ಮೊಸಳೆ ಕಣ್ಣೀರು ಹಾಕುತ್ತಾ ಜನತೆಯಲ್ಲಿ ಮತಯಾಚನೆಯಲ್ಲಿ ತೊಡಗಿದ್ದಾರೆ ಎಂದು ಜೆಡಿಎಸ್ ವಿರುದ್ಧ  ಎ.ಮಂಜು ವಾಗ್ದಾಳಿ ನಡೆಸಿದರು.
 ರಾಜ್ಯದಲ್ಲಿ ಕಾಂಗ್ರೆಸ್ ಬಿರುಗಾಳಿ ಬೀಸಿದೆ, ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದ ಎ.ಮಂಜು, ಯಾವುದೇ ಕಾರಣಕ್ಕೂ ಜೆಡಿಎಸ್  ಅಧಿಕಾರಕ್ಕೆ ಬರುವುದಿಲ್ಲ. ಶಾಸಕ ಎಚ್.ಸಿ. ಬಾಲಕೃಷ್ಣ ಎಚ್‌ಡಿಕೆ ಮುಖ್ಯಮಂತ್ರಿಯಾಗುತ್ತಾರೆ, ನಾನು ಮಂತ್ರಿಯಾಗುತ್ತೇನೆ ಎಂದು ಹಗಲು ಕನಸು ಕಾಣುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
   ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷ  ಚಿಗಳೂರು ಗಂಗಾಧರ್, ಮಾಜಿ ಅಧ್ಯಕ್ಷ ಕೆ.ಎಚ್.ಕೃಷ್ಣಮೂರ್ತಿ, ಜಿ.ಪಂ. ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಬಿ.ಎಸ್. ಕುಮಾರ್, ಸೋಮಶೇಖರ್, ಕುದೂರು ಮಂಜೇಶ್, ಪುರಸಭಾ ಸದಸ್ಯ ಎಂ.ಎನ್.ಮಂಜು, ಕೆ.ವಿ. ಬಾಲು    ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement