ಅಲೆಮಾರಿ ಕುಟುಂಬಗಳಿಗೆ ಮತದಾರ ಗುರುತಿನ ಚೀಟಿ ನೀಡುವಂತೆ ಆಗ್ರಹ
ಕ.ಪ್ರ.ವಾರ್ತೆ ಮಾಗಡಿ ಏ.7
ಅಲೆಮಾರಿ ಬುಡಕಟ್ಟು ಮಹಾ ಸಭಾ ವತಿಯಿಂದ ಅಲೆಮಾರಿ ಕುಟುಂಬಗಳಿಗೆ ಮತದಾರ ಗುರುತಿನ ಚೀಟಿ ನೀಡುವಂತೆ ಆಗ್ರಹಿಸಿ ಸಿಇಓ ವೆಂಕಟೇಶ್ ಮತ್ತು ತಹಸೀಲ್ದಾರ್ ಡಾ.ಹರೀಶ್ ನಾಯಕ್ ಅವರಲ್ಲಿ ಮನವಿ ಮಾಡಿಕೊಂಡರು.
ಇದೇ ವೇಳೆ ಮಾತನಾಡಿದ ಸಿಇಓ ವೆಂಕಟೇಶ್, ಆಯಾ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿಯಿಂದ ವಾಸ ಸ್ಥಳದ ಪರಿಶೀಲನೆ ನಡೆಸಿ, ಅವರಿಂದ ಸಂಬಂಧ ದಾಖಲೆಗಳನ್ನು ಪಡೆದು ಎಲ್ಲರಿಗೂ ಮತದಾರರ ಗುರುತಿನ ಚೀಟಿ ನೀಡಲು ಅಗತ್ಯ ಕ್ರಮ ವಹಿಸುತ್ತೇನೆ ಎಂದರು.
ಅಲೆಮಾರಿ ಬುಡಕಟ್ಟು ಸಮುದಾಯದ ರಂಗಪ್ಪ ಮಾತನಾಡಿ ನಾವು ಅಲೆಮಾರಿಗಳು ಕೂದಲು, ಬಳೆ, ಬೊಂಬೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿರುವವರು. ಹತ್ತಾರು ವರ್ಷಗಳಿಂದಲೂ ತಾಲೂಕಿನಲ್ಲೇ ವಾಸವಿದ್ದೇನೆ. ನಮಗೆ ಇಲ್ಲಿಯವರೆವಿಗೂ ಯಾವುದೇ ಗುರುತಿನ ಚೀಟಿ ನೀಡಿಲ್ಲ, ಪಡಿತರ ಚೀಟಿ ಸಹ ಇಲ್ಲ. ನಾವು ಸರ್ಕಾರದ ಸೌಲತ್ತುಗಳಿಂದ ವಂಚಿತರಾಗಿದ್ದೇನೆ ಎಂದು ತಿಳಿಸಿದರು.
ಇದೇ ವೇಳೆ ಅಲೆಮಾರಿ ಕುಟುಂಬದವರು ಗುರುತಿನ ಚೀಟಿಗಾಗಿ ಸಿಇಓ ವೆಂಕಟೇಶ್ ಅವರಲ್ಲಿ ಮನವಿ ಸಲ್ಲಿಸಿದರು. ಮಾಗಡಿ ಮಾರಪ್ಪ, ಮಹಾಸಭಾದ ಗೌರವಾಧ್ಯಕ್ಷ ಮಾರಣ್ಣ, ಗಂಗಮ್ಮ ಸೇರಿದಂತೆ ನೂರಾರು ಅಲೆಮಾರಿ ಮುಖಂಡರು ಇದ್ದರು.