ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ

Rashmi Kasaragodu
Updated On : 8 Apr 2013, 12:18 pm

ಕನಕಪುರ: ಕ್ಯಾನ್ಸರ್ ಕೇರ್ ಇಂಡಿಯಾ, ಸಹಾಯಟ್ರಸ್ಟ್, ಸುಮಂಗಲಿ ಸೇವಾಶ್ರಮ, ಎಂ.ಎಸ್.ರಾಮಯ್ಯ ಆಸ್ಪತ್ರೆ ಸಂಯುಕ್ತ ಆಶ್ರಯ ದಲ್ಲಿ ಕನಕಪುರ ತಾಲೂಕು ಜವನಮ್ಮನದೊಡ್ಡಿ ಗ್ರಾಮದಲ್ಲಿ ಉಚಿತ ಕ್ಯಾನ್ಸರ್‌ರೋಗ ತಪಾಸಣಾ ಶಿಬಿರ ನಡೆಯಿತು. ಶಿಬಿರದಲ್ಲಿ ಎರಡುನೂರಕ್ಕೂ ಹೆಚ್ಚು ಮಂದಿ ತಜ್ಞರಿಂದ ತಪಾಸಣೆ ಸೌಲಭ್ಯ ಪಡೆದರು. ಶಿಬಿರದಲ್ಲಿ ಉಚಿತ ಔಷಧಗಳನ್ನು ವಿತರಿಸಲಾಯಿತು.   ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದ ಜೆಡಿಎಸ್ ತಾ.ಅಧ್ಯಕ್ಷ ಸಿದ್ಧಮರಿಗೌಡ ಮಾತನಾಡುತ್ತಾ, ಸಮಾಜದ ಬಹುತೇಕ ಜನರು ಬಡತನದ ಬೇಗೆಯಲ್ಲಿ ನೊಂದಿದ್ದು ತಮಗಿರುವ ಕಾಯಿಲೆಗಳನ್ನು ರೋಗಗಳನ್ನು ಸಮರ್ಪಕ ಚಿಕಿತ್ಸೆಯಿಲ್ಲದೆ ಮೂಲಕವಾಗಿ ಅನುಭವಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿದರೆ ಬಡವರಿಗೆ ಬಹಳ ಅನುಕೂಲವಾಗುತ್ತದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement