ಉಪಚುನಾವಣೆಗೆ ಶಾಂತಿಯುತ ಮತದಾನ
ಕ.ಪ್ರ.ವಾರ್ತೆ ನೆಲಮಂಗಲ ಏ.7
ತಾಲೂಕಿನ ಟಿ.ಬೇಗೂರು ಜಿಲ್ಲಾ ಪಂಚಾಯ್ತಿ ಹಾಗೂ ಅರಿಶಿನಕುಂಟೆ ತಾಲೂಕು ಪಂಚಾಯ್ತಿ ತಲಾ 1 ಸ್ಥಾನಗಳಿಗೆ ನಡೆದ ಉಪಚುನಾವಣೆಗೆ ಶಾಂತಿಯುತ ಮತದಾನ ಭಾನುವಾರ ನಡೆಯಿತು.
ಮತದಾರರು ಬಿಸಿಲ ಬೇಗೆಯಲ್ಲಿ ಕೂಡ ಮತಹಾಕಿದರು. ತಾಲೂಕು ಪಂಚಾಯ್ತಿಯ ಅರಿಶಿನಕುಂಟೆ ಕ್ಷೇತ್ರದಲ್ಲಿ ಶೇಕಡಾ 55 ಮತದಾನವಾಗಿದೆ. ಟಿ.ಬೇಗೂರು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ 50 ಮತಗಟ್ಟೆಗಳಲ್ಲಿ ಶೇಕಡಾ 61 ಮತದಾನ ನಡೆದಿದೆ.
ಮತದಾನ ಬೆಳಿಗ್ಗೆ 7 ರಿಂದ 5ರವರೆಗೆ ನಡೆಯುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.