ಜೆಡಿಎಸ್ಗೆ ಸಿಂಧ್ಯಾರ ಬಲಗೈ ಬಂಟರ ರಾಜಿನಾಮೆ
ಕ.ಪ್ರ.ವಾರ್ತೆ ಕನಕಪುರ ಏ.7
ಭಾನುವಾರ ನಡೆದ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕಳೆದ ಮೂರೂವರೆ ದಶಕಗಳಿಂದ ಸಿಂಧ್ಯಾರ ಬಲಗೈ ಬಂಟರೆಂದೇ ಖ್ಯಾತರಾಗಿದ್ದ, ಎರಡು ಬಾರಿ ಜಿಪಂ ಸದಸ್ಯರಾಗಿ ಆಯ್ಕೆಗೊಂಡಿದ್ದ ಜೆಡಿಎಸ್ ಮುಖಂಡ ಮರಳವಾಡಿ ಗ್ರಾಮದ ಎಂ.ಎನ್.ನಾಗರಾಜು , ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎನ್.ಅನಿಲ್ ಕುಮಾರ್ ಮತ್ತು ತಾಪಂ ಸದಸ್ಯ ಪುರುಷೋತ್ತಮ್ ತಾವೆಲ್ಲರೂ ಬೇಷರತ್ತಾಗಿ ಏ.8 ರಂದು ರಾಮನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವುದಾಗಿ ಪ್ರಕಟಿಸಿದರು.
ತಾಲೂಕಿನ ಹಿರಿಯ ಜೆಡಿಎಸ್ ನಾಯಕರುಗಳ ಈ ನಡೆ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸುವುದರೊಂದಿಗೆ ಶಾಸಕ ಡಿ.ಕೆ. ಶಿವಕುಮಾರ್ ಪ್ರಾಬಲ್ಯವನ್ನು ಎತ್ತಿಹಿಡಿದಂತಾಗಿದೆ.
ಮುಖಂಡ ಎಂ.ಎನ್. ಅನಿಲ್ಕುಮಾರ್ ಮಾತನಾಡಿ ಕನಕಪುರ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ಅಭದ್ರತೆಯ ಭಾವದಿಂದ ತೊಳಲಾಡುತ್ತಿದ್ದಾರೆ. ಕಾರ್ಯಕರ್ತರ ಕುಂದುಕೊರತೆಗಳನ್ನು ಗಮನಿಸುವವರೇ ಇಲ್ಲದಂತಾಗಿದೆ. ಪಕ್ಷದ ಹಿರಿಯ ಮುಖಂಡರ ನಿರ್ಲಕ್ಷ್ಯದಿಂದ ಬೇಸತ್ತು ಜೆಡಿಎಸ್ ತೊರೆಯುವ ನಿರ್ಧಾರ ಕೈಗೊಳ್ಳುತ್ತಿದ್ದೇವೆ. ಮಾಜಿ ಸಚಿವ ಸಿಂಧ್ಯಾ ಅವರು ತಮ್ಮ ರಾಜಕೀಯ ಜೀವನದಲ್ಲಿ ಜನತಾಪಕ್ಷ, ಬಿಎಸ್ಪಿ ಮೊದಲಾದವುಗಳಿಗೆ ತೆರಳಿ ಅನೇಕ ಬಾರಿ ಕಾರ್ಯಕರ್ತರನ್ನು ಅತಂತ್ರಸ್ಥಿತಿಗೆ ದೂಡಿದ್ದಾರೆ. ಈಗಲೂ ಕೂಡಾ ಪಕ್ಷದ ಅಭ್ಯರ್ಥಿಯಾಗಿದ್ದರೂ ಚುನಾವಣಾ ಕಣದಿಂದಲೇ ದೂರ ಉಳಿಯಬಹುದೆಂಬ ಊಹಾಪೋಹಗಳಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾರ್ಯಕರ್ತರಿಗೆ ಪ್ರಬಲ ಅಭ್ಯರ್ಥಿಯನ್ನು ಬೆಂಬಲಿಸದೆ ಅನ್ಯಮಾರ್ಗವಿಲ್ಲ. ಶಾಸಕ ಡಿ.ಕೆ.ಶಿವಕುಮಾರ್ ಪ್ರಸಕ್ತ ಅವಧಿಯಲ್ಲಿ ಕೈಗೊಂಡಿರುವ ಅನೇಕ ಅಭಿವೃದ್ಧಿ ಕಾರ್ಯಗಳು ತಮ್ಮೆಲ್ಲರ ಗಮನಕ್ಕೆ ಬಂದಿದ್ದು ಅವರ ನಾಯಕತ್ವ ಒಪ್ಪಿ ನಾಳೆ ಅಧಿಕೃತವಾಗಿ ಕಾಂಗ್ರೆಸ್ಗೆ ಸೇರ್ಪಡೆಗೊಳ್ಳುತ್ತಿದ್ದೇವೆ ಎಂದು ಅನಿಲ್ಕುಮಾರ್ ತಿಳಿಸಿದರು.
ಮುಖಂಡರುಗಳಾದ ಪುರುಷೋತ್ತಮ್ ,ಈಶ್ವರ್ಪಾಲ್ಗೊಂಡಿದ್ದರು.