ಸರ್ಕಾರಿ ಪ್ರಾಥಮಿಕ ಶಾಲೆಗೆ ನಿವೇಶನ ನೀಡಿದ ದಾನಿಗಳು
ಮಧುಗಿರಿ: ತಾಲೂಕಿನ ದೊಡ್ಡೇರಿ ಹೋಬಳಿ ರಂಗಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅದೇ ಗ್ರಾಮದ ನಿವಾಸಿ ಆರ್.ಸಿ.ರಾಮಣ್ಣ ಮತ್ತು ಆರ್.ಸಿ.ಪ್ರಶಾಂತ್ ಅವರು ಸ್ವಇಚ್ಛೆಯಿಂದ ಶಾಲೆಗೆ ತಲಾ 30-40 ಅಳತೆಯ ನಿವೇಶನ ದಾನ ಮಾಡುವ ಮೂಲಕ ತಮ್ಮ ಹುಟ್ಟೂರಿನ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕೊಡುಗೆಯಾಗಿ ನೀಡಿದ್ದಾರೆ.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎನ್. ರಾಮಕೃಷ್ಣಯ್ಯ ಅವರಿಗೆ ಭೂದಾನದ ಪತ್ರ ನೀಡಿದರು. ಮುಖ್ಯ ಶಿಕ್ಷಕ ನರಸಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ, ಮುಖಂಡ ಚೌಡಪ್ಪ, ಕೃಷ್ಣಮೂರ್ತಿ, ನರಸಿಂಹಮೂರ್ತಿ ಸಿಆರ್ಸಿ ಶಿವರಾಮಯ್ಯ ಸದಸ್ಯರು ಇತರರು ಇದ್ದರು.