ಹೊಳೆನರಸೀಪುರ: 11 ಮಂದಿ ಬಿಜೆಪಿ ಸ್ಪರ್ಧಾಕಾಂಕ್ಷಿಗಳು
ಹಾಸನ: ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಲು 11 ಆಕಾಂಕ್ಷಿಗಳು ಇದ್ದು, ಅವರ ಹೆಸರು ಇಂತಿದೆ.
ಹಾಸನ ತಾ. ಶಾಂತಿಗ್ರಾಮ ಹೋಬಳಿ ಮೊಸಳೆ ಗ್ರಾಮದ ಎಂ.ಆರ್. ಸತ್ಯನಾರಾಯಣ್, ಹೊಳೆನರಸೀಪುರ ಕಸಬಾ ಹೋಬಳಿ ಮಾರಗೋಡನಹಳ್ಳಿಯ ಎಂ.ಎನ್.ರಾಜು, ಶಾಂತಿಗ್ರಾಮ ಹೋಬಳಿ ಶಾಂತಿಗ್ರಾಮದ ಜಿ.ಟಿ.ಹೇಮಂತ್ಕುಮಾರ್.
ಹಳೇಕೋಟೆ ಹೋಬಳಿ ಚಿಕ್ಕನಹಳ್ಳಿಯ ಕಳಸಮ್ಮ, ದುದ್ದ ಹೋಬಳಿ ಮಹದೇವರಹಳ್ಳಿಯ ಮಂಜೇಶ, ಶಾಂತಿಗ್ರಾಮ ಹೋಬಳಿ ಅಮ್ಮಗೌಡನಹಳ್ಳಿಯ ಎ.ಟಿ.ಚಂದ್ರೇಗೌಡ, ದುದ್ದ ಹೋಬಳಿ ಚಿಕ್ಕಕಡಲೂರಿನ ಚನ್ನಕೇಶವ.
ಕುದುರುಗುಂಡಿಯ ಕೆ.ಎಂ.ಪಾಲಾಕ್ಷಮೂರ್ತಿ, ಶಾಂತಿಗ್ರಾಮ ಹೋಬಳಿಯ ಬೆಣಗಟ್ಟೆ ಗ್ರಾಮದ ಬಿ.ವಿ.ಚನ್ನೇಗೌಡ, ದುದ್ದ ಗ್ರಾಮದ ವಕೀಲ ಬೆಟ್ಟೇಗೌಡ, ಕಬ್ಬಳಿ ಗ್ರಾಮದ ವಕೀಲ ಎಚ್.ಆರ್. ರಂಗನಾಥ ಸ್ಪರ್ಧಾಕಾಂಕ್ಷಿಗಳಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.