ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜಾತಿಗಿಂತ ವ್ಯಕ್ತಿಯದೇ ಪಾತ್ರ

Rashmi Kasaragodu
Updated On : 9 Apr 2013, 1:29 am

ಕ.ಪ್ರ.ವಾರ್ತೆ, ಸೂಲಿಬೆಲೆ, ಏ.8
ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ರಾಜಕಾರಣದ ರಂಗು ದಿನದಿಂದ ದಿನಕ್ಕೆ ಬೇಸಿಗೆ ಬಿಸಿಯಂತೆ ಏರುತ್ತಿದೆ. ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಅಸ್ತಿತ್ವವನ್ನು ಹೊಂದಿರುವ ಕ್ಷೇತ್ರದಲ್ಲಿ ಜಾತಿಗಿಂತ ಸ್ಪರ್ಧಿಯೇ ಪ್ರಧಾನವಾಗಿ  ಮತದಾರರನ್ನು ಸೆಳೆದು ಗೆದ್ದು ಬಂದಿರುವದು ಕ್ಷೇತ್ರದ ಪ್ಲಸ್ ಪಾಯಿಂಟಾಗಿದೆ.
 ಕ್ಷೇತ್ರದಲ್ಲಿ ಹಲವಾರು ಜಾತಿಗಳಿದ್ದರೂ ಒಕ್ಕಲಿಗ, ಪರಿಶಿಷ್ಟ ಹಾಗೂ ಮುಸ್ಲಿಂ ಮತಗಳೇ ನಿಣಾರ್ಯಕವಾಗಲಿದ್ದು, 5 ಬಾರಿ ಕ್ಷೇತ್ರವನ್ನು ಆಳಿರುವ ಬಚ್ಚೇಗೌಡರು 6ನೇ ಬಾರಿ ಅಗ್ನಿ ಪರೀಕ್ಷೆಗೆ ಇಳಿದಿದ್ದಾರೆ.
5 ಹೋಬಳಿಗಳನ್ನು ಹೊಂದಿರುವ ಹೊಸಕೋಟೆ ಕ್ಷೇತ್ರ ಒಂದು ಕಾಲದಲ್ಲಿ ದೇವನಹಳ್ಳಿ ಕ್ಷೇತ್ರದೊಂದಿಗೆ ವಿಲೀನಗೊಂಡಿತ್ತು. ಇಲ್ಲಿಂದ ಪ್ರತ್ಯೇಕಗೊಂಡ ನಂತರ 1978ರಲ್ಲಿ ನಡೆದ ಚುನಾವಣೆಯಲ್ಲಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಬಿ.ಎನ್.ಬಚ್ಚೇಗೌಡರು ಪ್ರಥಮ ಬಾರಿಗೆ ಚಿಕ್ಕಗೌಡರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದರು. 1985ರಲ್ಲಿ ಮತ್ತೆ ಚಿಕ್ಕಗೌಡರನ್ನು, 1994ರಲ್ಲಿ ಮುನೇಗೌಡರನ್ನು ಸೋಲಿಸಿದ್ದರು. 1999ರಲ್ಲಿ ಕಾಂಗ್ರೆಸ್‌ನ ಎನ್.ನಾಗರಾಜ್ ವಿರುದ್ಧ ಕೆಲವೇ ಮತಗಳ ಅಂತರದಲ್ಲಿ ಸೋತ ಬಚ್ಚೇಗೌಡರು 2008ರಲ್ಲಿ 5ನೇ ಬಾರಿಗೆ ವಿಜಯ ಪತಾಕೆ ಹಾರಿಸಿದರು. ಒಕ್ಕಲಿಗ ಸಮುದಾಯಕ್ಕೆ ಸೇರಿದ ಬಚ್ಚೇಗೌಡರನ್ನು ಕ್ಷೇತ್ರದ ಜನತೆ ಎಂದೂ ಜಾತಿಯನ್ನು ಮುಂದಿಟ್ಟು ಯೋಚಿಸದೇ ಗೆಲವಿನ ಮಾರ್ಗದಲ್ಲಿ ಕರೆದುಕೊಂಡು ಹೋದರು. ಸೂಲಿಬೆಲೆ, ನಂದಗುಡಿ ಹೋಬಳಿ ಮತದಾರರು ಪ್ರತಿ ಫಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಬಚ್ಚೇಗೌಡರನ್ನು ಮಣಿಸಲು ಎದುರಾಳಿಗಳು ನಡೆಸಿದ ಕಸರತ್ತುಗಳಿಗೆ ಕ್ಷೇತ್ರದ ಜನತೆ ವ್ಯಕ್ತಿ ನಿಷ್ಠೆಯ ನಿರೀಕ್ಷಿತ ಫಲಿತಾಂಶಗಳನ್ನು ನೀಡುತ್ತಿದ್ದಾರೆ.
ಬಚ್ಚೇಗೌಡರೆದುರು ಸೋತವರು: ಸದ್ಯ 1,76,311 ಮತದಾರರನ್ನು ಹೊಂದಿರುವ ಕ್ಷೇತ್ರದಲ್ಲಿ ಬಚ್ಚೇಗೌಡರ ಎದುರು ಮೂರು ಬಾರಿ  ಚಿಕ್ಕೇಗೌಡರು ಸೋತಿದ್ದರು. 1999ರಲ್ಲಿ ಮುನೇಗೌಡರನ್ನು ಮಣಿಸಿದ್ದರು. 2008ರಲ್ಲಿ ಎನ್.ನಾಗರಾಜ ಅವರನ್ನು ಸೋಲಿಸಿದ್ದರು. 2013ರಲ್ಲಿ ಮತ್ತೆ ನಾಗರಾಜ್ ಎದುರಾಳಿಯಾಗಿದ್ದು, ಯಾರ ಪಾಲಿಗೆ ವಿಜಯದ ಮಾಲೆ ಬೀಳುತ್ತದೋ ಕಾದು ನೋಡಬೇಕಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement