ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರಾಜ್ಯದಲ್ಲಿ ಬಿಎಸ್‌ಆರ್ ಕಾಂಗ್ರೆಸ್ 80 ಸ್ಥಾನಗಳಲ್ಲಿ ಗೆಲವು ಖಚಿತ

Rashmi Kasaragodu
Updated On : 9 Apr 2013, 1:29 am

ಚಿಕ್ಕನಾಯಕನಹಳ್ಳಿ: ರಾಜಕೀಯ ಅನುಭವವಿಲ್ಲದಿದ್ದರೂ, ಸಮಾಜಸೇವೆ ಮಾಡುವ ಉತ್ಸುಕತೆಯಿರುವುದರಿಂದ ರಾಜಕೀಯ ಕ್ಷೇತ್ರಕ್ಕೆ ಬಂದಿದ್ದೇನೆ ಎಂದು ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಕುಪ್ಪೂರು ಕೆ.ಎಲ್.ದೇವರಾಜು ನುಡಿದರು. ಅವರು ಪಟ್ಟಣದ ಪಕ್ಷದ ಚುನಾವಣಾ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.ನನಗೆ ಅಧಿಕಾರದ ಆಸೆಯಿಲ್ಲ, ಆದರೆ ಸಮಾಜ ಸೇವೆ ಮಾಡುವ ತುಡಿತವಿದೆ. ಆದ್ದರಿಂದ ರಾಜಕೀಯ ರಂಗದಲ್ಲಿ  ಅಧಿಕಾರ ಹಿಡಿದರೆ ಹೆಚ್ಚಿನ ಸೇವೆ ಮಾಡಲು ಶಕ್ತಿ ಬರುತ್ತದೆ ಎಂದು ಈ ಕ್ಷೇತ್ರವನ್ನು ಆಯ್ಕೆಮಾಡಿಕೊಂಡಿದ್ದೇನೆ. ಈ ಹಿಂದೆ ಇಲ್ಲಿಯ ಅಭ್ಯರ್ಥಿಯಾಗಿ ರಾಮಾಂಜನಪ್ಪನವರು ಪಕ್ಷದ ಸಂಘಟನೆ ಮಾಡಿದ್ದರು. ನಂತರ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷರಾದ ಹಳೇಮನೆ ಶಿವನಂಜಪ್ಪನವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಸುದ್ದಿ ಹರಡಿದ್ದು, ಈಗ ನೀವು ಅಭ್ಯರ್ಥಿಯಾಗುವುದರಿಂದ ಅವರು ನಿಮಗೆ ಸಹಕರಿಸುತ್ತಾರೆಂಬ ಭರವಸೆಯಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ,ಶಿವನಂಜಪ್ಪನವರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ರಾಮಾಂಜನಪ್ಪನವರ ಆಶೀರ್ವಾದ ಪಡೆದು ಇಲ್ಲಿ ಅಭ್ಯರ್ಥಿಯಾಗಿದ್ದೇನೆ. ಅವರ ಸಹಕಾರ ನನಗೆ ದೊರೆತಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement