ಚುನಾವಣಾಧಿಕಾರಿಯಿಂದ ಮತಗಟ್ಟೆ ವ್ಯವಸ್ಥೆ ವೀಕ್ಷಣೆ
ಮಾಗಡಿ: ಮತಗಟ್ಟೆ ವ್ಯವಸ್ಥೆಯನ್ನು ಚುನಾವಣಾಧಿಕಾರಿ ವೈಶಾಲಿ ಹಾಗೂ ತಹಸೀಲ್ದಾರ್ ಡಾ. ಬಿ.ಆರ್. ಹರೀಶ್ ನಾಯಕ್ ಇತರೆ ಸಿಬ್ಬಂದಿಗಳೊಂದಿಗೆ ವೀಕ್ಷಿಸಿದರು.
ಮಾಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 288 ಮತಗಟ್ಟೆ ಕೇಂದ್ರಗಳಿದ್ದು, ಸಿ.ಆರ್.ಪಿಗಳು ತಮ್ಮ ವ್ಯಾಪ್ತಿಯಲ್ಲಿ ಕೈಗೊಂಡಿರುವ ಮತಗಟ್ಟೆಗಳಿಗೆ ಚುನಾವಣಾಧಿಕಾರಿ ವೈಶಾಲಿ ಅವರು ಖದ್ದು ಭೇಟಿ ನೀಡಿ ಪರಿಶೀಲಿಸಿದರು.
ಮತಗಟ್ಟೆ ಕೊಠಡಿಗಳಲ್ಲಿನ ಕಿಟಕಿ, ಬಾಗಿಲು, ವಿದ್ಯುತ್ ಸಂಪರ್ಕ ಹಾಗೂ ಶೌಚಾಲಯದ
ಸುವ್ಯವಸ್ಥೆಯ ಬಗ್ಗೆ ಪರಿಶೀಲಿಸಿ, ಸುಸ್ಥಿತಿಯಲ್ಲಿಡುವಂತೆ ಸಂಬಂಧಪಟ್ಟ ಸಿ.ಆರ್.ಪಿಗಳು ಮುಖ್ಯಶಿಕ್ಷಕರುಗಳಿಗೆ ಸೂಚಿಸಬೇಕು ಎಂದು ತಿಳಿಸಿದರು. ಇದೇ ವೇಳೆ ಸುಮಾರು 45ಕ್ಕೂ ಹೆಚ್ಚು ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿದ ಚುನಾವಣಾಧಿಕಾರಿ ವೈಶಾಲಿ ಅವರು ಸಿ.ಆರ್.ಪಿ. ಮತ್ತು ಸಿಬ್ಬಂದಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ತಹಸೀಲ್ದಾರ್ ಡಾ. ಹರೀಶ್ ನಾಯಕ್, ಎಂಸಿಸಿಗಳಾದ ಅಕ್ಕೋಜಿ, ಡಾ.ರಾಜಶೇಖರ್, ಕೃಷ್ಣಪ್ಪ, ರೂಪಶ್ರೀ, ಚುನಾವಣಾ ಶಿರಸ್ತೇದಾರ್ ಶಿವಕುಮಾರ್, ಗುರುಲಿಂಗಯ್ಯ, ರೆವಿನ್ಯೂ ಅಧಿಕಾರಿಗಳಾದ ಮಹಾಲಿಂಗಪ್ಪ, ಮಹದೇವಯ್ಯ, ಗ್ರಾಮ ಲೆಕ್ಕಾಧಿಕಾರಿ ವೆಂಕಟೇಶ್, ಸಿ.ಆರ್.ಪಿಗಳು ಇತರರು ಹಾಜರಿದ್ದರು.