ತಾಲೂಕು ಮಟ್ಟದ ನಿಯಂತ್ರಣ ಕೊಠಡಿ ಸ್ಥಾಪನೆ
ಕ.ಪ್ರ.ವಾರ್ತೆ ರಾಮನಗರ ಏ.9
ಪ್ರಸಕ್ತ ಚುನಾವಣೆಯಲ್ಲಿ ಅಕ್ರಮ ಮದ್ಯ ಸಾಗಣೆ, ದಾಸ್ತಾನು, ಕಳ್ಳಭಟ್ಟಿ ತಯಾರಿಕೆ ಹಾಗೂ ಮಾರಾಟ ತಡೆ ನಿಟ್ಟಿನಲ್ಲಿ ಕಟ್ಟೆಚ್ಚರ ವಹಿಸಲು ಅಬಕಾರಿ ಇಲಾಖೆಯಿಂದ ಜಿಲ್ಲೆ, ಉಪ ವಿಭಾಗ ಮತ್ತು ತಾಲೂಕು ಮಟ್ಟದಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ.
ಜಿಲ್ಲಾ ಮಟ್ಟದ ನಿಯಂತ್ರಣ ಕೊಠಡಿಯನ್ನು ರಾಮನಗರದ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ಸ್ಥಾಪಿಸಲಾಗಿದೆ. ಜಿಲ್ಲೆಯ ಉಪ ಆಯುಕ್ತ ಎಸ್.ಶ್ರೀನಿವಾಸಮೂರ್ತಿ ಮೇಲ್ವಿಚಾರಕರಾಗಿರುತ್ತಾರೆ. ಉಪ ಅಧೀಕ್ಷಕ ದೀಪಕ್ ಉಪ ಮೇಲ್ವಿಚಾರಣಾಧಿಕಾರಿ. ದೂ.2721059, ಮೊ.9449597771, ಸಂಪರ್ಕಿಸಿ ದೂರು ನೀಡಬಹುದು.
ಉಪ ವಿಭಾಗ, ವಲಯ: ರಾಮನಗರ ಉಪ ವಿಭಾಗದ ಮೇಲ್ವಿಚಾರಣಾಧಿಕಾರಿಯಾಗಿ ಜಿ.ಪಿ.ನರೇಂದ್ರ ಕುಮಾರ್(ದೂ.7274812) ಕಾರ್ಯ ನಿರ್ವಹಿಸುವರು. ರಾಮನಗರ ವಲಯ ಕಂಟ್ರೋಲ್ ರೂಂ ದೂ. 7274812 ಆಗಿದೆ. ಎಂ.ಎಸ್.ನಾರಾಯಣ ಮೊ.9449597275. ಚನ್ನಪಟ್ಟಣ ವಲಯ ಕಂಟ್ರೋಲ್ ರೂಂ ದೂ.7253268. ನಾರಾಯಣ, ಮೊ.9449597273. ಕನಕಪುರ ವಲಯ ಕಂಟ್ರೋಲ್ ರೂಂ ದೂ.7523865. ವಸಂತಕುಮಾರ್ ಮೊ.9449597272.
ಮಾಗಡಿ ವಲಯ ದೂ.7745209, ನಾರಾಯಣ 9449597274. ವಲಯ ಕಂಟ್ರೋಲ್ ರೂಂಗಳು ಜಿಲ್ಲಾ ಮಟ್ಟದ ನಿಯಂತ್ರಣ ಕೊಠಡಿಯಿಂದ ಬರುವ ನಿರ್ದೇಶನಗಳನ್ನು ಪಾಲಿಸಿ ತಾಲೂಕಿಗೆ ಹೊಂದಿಕೊಂಡ ಬೇರೆ ಜಿಲ್ಲೆಗಳ ಗಡಿಭಾಗಗಳಲ್ಲಿ ಸ್ಥಾಪನೆಯಾದ ಚೆಕ್ಪೋಸ್ಟ್ಗಳಲ್ಲಿ ಅಕ್ರಮ ಮದ್ಯ ಸಾಗಾಣಿಕೆಯಾಗದಂತೆ ಕಾವಲು ಕಾಯುತ್ತವೆ.
ದಾಸ್ತಾನು ತಡೆಗೆ ಕ್ರಮ: ಅಗತ್ಯಕ್ಕಿಂತ ಹೆಚ್ಚು ಮದ್ಯ ದಾಸ್ತಾನು ಆಗದಂತೆ ನಿಗಾ ವಹಿಸಿ. ಖರೀದಿಸಿದ ಮದ್ಯವು ಚುನಾವಣಾ ಸಮಯದಲ್ಲಿ ದುರ್ಬಳಕೆಯಾಗದಂತೆ ನೋಡಿಕೊಳ್ಳುವುದು ಹಾಗೂ ಅಕ್ರಮಗಳು ಕಂಡುಬಂದಲ್ಲಿ ಕಾನೂನಿನನ್ವಯ ಕ್ರಮ ಜರುಗಿಸುವುದು ವಲಯ ಯುನಿಟ್ಗಳ ಜವಾಬ್ದಾರಿಯಾಗಿರುತ್ತದೆ.
24 ಗಂಟೆ 2 ಪಾಳಿಯಲ್ಲಿ ತಂಡಗಳನ್ನು ರಚಿಸಿ ಗಸ್ತು ತಿರುಗಿ ಅಕ್ರಮಗಳು ಸಂಭವಿಸದಂತೆ ಕಾರ್ಯ ನಿರ್ವಹಿಸಲಾಗುವುದು.
ಚುನಾವಣಾ ಕಾರ್ಯ ಮುಕ್ತಾಯ ಆಗುವವರೆಗೂ ಅಗತ್ಯ ಕ್ರಮ ಕೈಗೊಂಡು, ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಲು ಜಿಲ್ಲಾ ಅಬಕಾರಿ ಇಲಾಖೆ ಸಜ್ಜಾಗಿದೆ. ಯಾವುದೇ ಲೋಪದೋಷಗಳು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಜವಾಬ್ದಾರರನ್ನಾಗಿ ಮಾಡಿ ಶಿಸ್ತು ಕ್ರಮಕ್ಕೆ ಒಳಪಡಿಸುವುದಾಗಿ ಜಿಲ್ಲಾ ಅಬಕಾರಿ ಉಪ ಆಯುಕ್ತ ಎಸ್.ಶ್ರೀನಿವಾಸಮೂರ್ತಿ ಎಚ್ಚರಿಸಿದ್ದಾರೆ.
ಕನಕಪುರ ವಲಯದಲ್ಲಿ ಸರಹದ್ದಿನ ದೊಡ್ಡಿ ಹಾಗೂ ದೊಡ್ಡೂರು ಬಳಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಪೊಲೀಸ್, ಅರಣ್ಯ, ಸಾರಿಗೆ, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಬ್ಬಂದಿಯೊಂದಿಗೆ ಅಬಕಾರಿ ಇಲಾಖೆ ಕರ್ತವ್ಯ ನಿರ್ವಹಿಸಲಿದೆ.