ಉಪ ಚುನಾವಣೆ: ಜೆಡಿಎಸ್ ಗೆಲವು
ಕ.ಪ್ರಭ. ವಾರ್ತೆ ನೆಲಮಂಗಲ ಏ.10
ತಾಲೂಕಿನ ಟಿ. ಬೇಗೂರು ಜಿಲ್ಲಾ ಹಾಗೂ ಅರಿಶಿನಕುಂಟೆ ತಾಲೂಕು ಪಂಚಾಯ್ತಿ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಜಿ.ಪಂ. ಮತ್ತು ತಾ.ಪಂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯ ಗಳಿಸಿದರು.
ಅಭ್ಯರ್ಥಿಗಳು ಪಡೆದ ಮತಗಳ ವಿವರ ಈ ಕೆಳಕಂಡಂತಿವೆ.
ಜಿಲ್ಲಾ ಪಂಚಾಯ್ತಿ ಕ್ಷೇತ್ರ: ಟಿ.ಬೇಗೂರು ಕ್ಷೇತ್ರ - ಜೆ.ಡಿ.ಎಸ್ ಬಿ.ಎಂ.ಎಲ್. ಕಾಂತರಾಜು 14336 ಮತಗಳು, ಕಾಂಗ್ರೆಸ್ ನಾಗರಾಜು 7025 ಮತಗಳು, ಬಿಜೆಪಿ ನಾಗರಾಜು 1577 ಮತಗಳು.
ತಾಲೂಕು ಪಂಚಾಯ್ತಿ ಕ್ಷೇತ್ರ: ಅರಿಶಿನಕುಂಟೆ - ಜೆ.ಡಿ.ಎಸ್ ವರಲಕ್ಷ್ಮಿ 3307 ಮತಗಳು, ಕಾಂಗ್ರೆಸ್ ಹನುಮಂತಮ್ಮ 2390 ಮತಗಳು, ಬಿಜೆಪಿ ಸುಮಲತಾ 494 ಮತಗಳನ್ನು ಪಡೆದಿದ್ದಾರೆ ಎಂದು ಚುನಾವಣಾಧಿಕಾರಿ ಸುನಿಲ್ಕುಮಾರ್ ತಿಳಿಸಿದ್ದಾರೆ.