ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಾಂಗ್ರೆಸ್ ಸೇರಿದ ಬಿಜೆಪಿ ಕಾರ್ಯಕರ್ತರು

Mainashree
Updated On : 11 Apr 2013, 1:28 am

ಕ.ಪ್ರಭ. ವಾರ್ತೆ   ಕನಕಪುರ   ಏ.10
ಕನಕಪುರ ರೋಟರಿಭವನದಲ್ಲಿ ಶಾಸಕ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ಬಲಿಜ ಮಹಿಳಾ ಸಂಘದ ಸದಸ್ಯರು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡರು.
ಬಿಜೆಪಿ ಮುಖಂಡರಾದ ಕಿಟ್ಟಿ(ಕೃಷ್ಣಮೂರ್ತಿ), ನರಸಿಂಹಮೂರ್ತಿ, ನಾಗರಾಜು, ಸೀತಾರಾಮು, ಮಾಂಗೀಲಾಲ್, ರೋಹಿಣಿಪಾಲ್, ಬಲಿಜ ಮಹಿಳಾ ಸಂಘದ ಅಧ್ಯಕ್ಷೆ ರತ್ನನಾಗರಾಜು, ಪ್ರಧಾನ ಕಾರ್ಯದರ್ಶಿ ಅಂಬಿಕಾ, ಪದಾಧಿಕಾರಿಗಳಾದ ರೇಖಾ, ವರಲಕ್ಷ್ಮಿ, ಪವಿತ್ರ, ಅಶ್ವಿನಿ ಇತರರು ತಮ್ಮ ಗೆಳೆಯರು, ಕುಟುಂಬದ ಸದಸ್ಯರು ಹಾಗೂ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಗೊಂಡರು.  ಶಾಸಕ ಡಿ.ಕೆ.ಶಿವಕುಮಾರ್ ಮಾತನಾಡಿ, ಸೋಲಿನ ಭೀತಿಯಿಂದ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ತಮ್ಮ ವಿರುದ್ಧ ಅಪಪ್ರಚಾರ ನಡೆಸಿದ್ದಾರೆ. ಕಾಣಿಕೆಗಳನ್ನು ಹಂಚುತ್ತಿದ್ದೇನೆ ಎಂದು ಆರೋಪಿಸಿದ್ದಾರೆ. ಚುನಾವಣೆ ಘೋಷಣೆಯಾದ ಮೇಲೆ ತಾವು ಯಾವುದೇ ಬೃಹತ್ ಕಾರ್ಯಕ್ರಮ ನಡೆಸಿಲ್ಲ. ಹಬ್ಬದ ಹೆಸರಲ್ಲಿ ಮನೆಗಳಿಗೆ ದಿನಸಿ ಹಂಚುತ್ತಾ ತಿರುಗುತ್ತಿರುವ, ಸುಳ್ಳುಗಾರರೆಂದೇ ಹೆಸರಾಗಿರುವ ಸಿಂಧ್ಯಾರವರು ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಜಿದ್ದಿನಿಂದ ರಾಜಕೀಯ ನಡೆಸುತ್ತಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ ಮುಖಂಡರಾದ ಡಿ.ಕೆ.ಸುರೇಶ್, ಮಾಜಿ ವಿಪ ಸದಸ್ಯ ಎಸ್.ರವಿ, ಜಿಲ್ಲಾ ಉಪಾಧ್ಯಕ್ಷ ವಿ.ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯದೇವ್, ಕೆ.ಎನ್.ದಿಲೀಪ್, ಮುನಿಯಪ್ಪ, ಜಿಪಂ ಸದಸ್ಯೆ ನಳಿನಾ ರವಿಶಂಕರ್, ವೆಂಕಟೇಶಯ್ಯ, ತಿಗಳರ ಸಂಘದ ಅಧ್ಯಕ್ಷ ವೆಂಕಟೇಶಪ್ಪ, ಸಿ.ವಿಜಯ್, ರಾಮಚಂದ್ರ, ಜೋಸೆಫ್ ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement