ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ತೊಗಟವೀರ ನೇಕಾರರ ಸಂಘದ ಉದ್ಘಾಟನೆ

Mainashree
Updated On : 11 Apr 2013, 1:29 am

ಕ.ಪ್ರಭ. ವಾರ್ತೆ   ವಿಜಯಪುರ   ಏ.10
ಇಂದಿನ ಯುವ ಸಮೂಹಕ್ಕೆ ಗುರು ಹಿರಿಯರು  ಸರಿಯಾದ ಗುರಿ ತೋರಿಸುವಂತಿರಬೇಕು. ಆಗಲೇ ಉತ್ತಮ ಸಮಾಜ ಮತ್ತು ಉತ್ತಮ ಜೀವನ ಶೈಲಿ ಬರಲು  ಸಾಧ್ಯ ಎಂದು ಶ್ರೀ ದಿವ್ಯಜ್ಞಾನನಂದಗಿರಿ ಸ್ವಾಮಿಗಳು ಆಶೀರ್ವಚನ ನೀಡುತ್ತಾ ತಿಳಿಸಿದರು.
ಅವರು ಇಲ್ಲಿನ ಮಂಡಿಬೆಲೆ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಚೌಡೇಶ್ವರಿ ದೇವಾಲ ಯದ ಬಳಿ ತೊಗಟವೀರ ನೇಕಾರರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ಪ್ರತಿಯೊಬ್ಬರು ತಾವು ಗಳಿಸುತ್ತಿರುವುದರಲ್ಲಿ ಅಲ್ಪವಾದರೂ ಸಮಾಜದ ಒಳಿತಿಗಾಗಿ ಮೀಸಲಾಗಿ ಡಬೇಕು. ಜೊತೆ ಜೊತೆಗೆ ತಮ್ಮ ವೃತ್ತಿಯನ್ನು ಗೌರವಿಸಿ ದುಡಿಯುವುದರೊಂದಿಗೆ ಹೊರಗಿನ ಪ್ರಪಂಚದ ಕಡೆ ಗಮನ ಹರಿಸಿ ತಾವು ಕೂಡ ಬೆಳೆಯಬೇಕು ಎಂದು ತಿಳಿಸಿದರು.
 ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಕೀಲ ವಿಜಯಕುಮಾರ್ ಮಾತನಾಡಿ, ಪ್ರತಿಯೊಬ್ಬರು ತಮ್ಮ ಸಂಘಗಳ ನಿಯಮ ನಿಬಂಧನೆಗಳಿಗೆ ಅನುಗುಣವಾಗಿ ನಡೆದರೆ ಸಂಘ ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯ. ಪಟ್ಟಣದಲ್ಲಿ ಯುವ ಜನತೆ ಹುರುಪಿನಿಂದ ತೊಗಟವೀರ ನೇಕಾರರ ಸಂಘವನ್ನು ಕಟ್ಟುವುದರೊಂದಿಗೆ ಚೌಡೇಶ್ವರಿ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. ಇದು ಶ್ಲಾಘನೀಯವೆಂದು ಪ್ರೋತ್ಸಾಹಿಸಿ 10 ಸಾವಿರ ರು.ಗಳನ್ನು ಕೊಡುವುದಾಗಿ ಆಶ್ವಾಸನೆ ನೀಡಿದರು.
 9ನೇ ವಾರ್ಡಿನ ಸದಸ್ಯ ಅನಸೂಯಮ್ಮ ಸಂಪತ್ ಕುಮಾರ್ ಈ ವಾರ್ಡಿನ ಚೌಡೇಶ್ವರಿ ದೇವಾಲಯ ನಿರ್ಮಿಸುತ್ತಿರುವುದು ಧಾರ್ಮಿಕ ಪೂಜಾ ಕಾರ್ಯಗಳಿಗೆ ಅನುಕೂಲವಾಗುತ್ತದೆ. ಪುರಸಭೆಯಿಂದ ಸಿಗುವಂತಹ ಅನುದಾನಗಳನ್ನು ಕೊಡಿಸುವುದಾಗಿ ತಿಳಿಸಿದರು. ನೇಕಾರರ ರಕ್ಷಣಾ ವೇದಿಕೆಯ ಪ್ರಕಾಶ, ದೇವನಹಳ್ಳಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾಧಮ್ಮ, ಎನ್. ಮೋಹನ್ಬಾಬು, ಸಂಘದವರಾದ ಗೋಪಾಲಕೃಷ್ಣ, ಜಯರಾಮಪ್ಪ, ಮುನಿಕೃಷ್ಣಪ್ಪ, ಪುರಸಭಾ ಮಾಜಿ ಸದಸ್ಯರಾದ ನಂಜುಂಡಪ್ಪ, ಸಂಪತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement