ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಉತ್ತಮರನ್ನು ಆಯ್ಕೆ ಮಾಡಿ: ಸುರೇಶ್

Vishwanath S
Updated On : 13 Apr 2013, 1:07 am

ನೆಲಮಂಗಲ: ಜನತೆಯ ಹಿತ ಬಯಸುವ  ಜನ ಪ್ರತಿನಿಧಿಗಳನ್ನು ಆಯ್ಕೆಗೊಳಿಸುವುದು ಯುವ ಮತದಾರರ ಕರ್ತವ್ಯವಾಗಿದೆ ಎಂದು ವಕೀಲ ಸುರೇಶ್ ಕಿವಿಮಾತು ಹೇಳಿದ್ದಾರೆ.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ  ಪುರಸಭೆ ಹಾಗೂ ಮುನಿಯಮ್ಮ ಓಬಳಯ್ಯ ವಿದ್ಯಾವಾಹಿನಿ ಸಂಸ್ಥೆ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಶಿಬಿರದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.   ಯುವ ಮತದಾರರು ರಾಜಕಾರಣಿಗಳ ಆಸೆ ಆಮಿಷಗಳಿಗೆ ಒಳಗಾಗದೆ, ನಾಗರಿಕ ಸಮಾಜಕ್ಕೆ ಅರಿವು ಮೂಡಿಸಿ ಉತ್ತಮ ಆಡಳಿತ ನೀಡಬಲ್ಲ ವ್ಯಕ್ತಿಗಳನ್ನು  ಆಯ್ಕೆಗೊಳಿಸಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಪ್ರತಿಪಾದಿಸಿದರು. ಕೆ.ಒ.ಮಹೇಶ್, ಮುಖಂಡ ರಾಜಣ್ಣ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement