'ಗೆಲವಿಗೆ ಅಭಿವೃದ್ಧಿಯೇ ಶ್ರೀರಕ್ಷೆ'
ಕ.ಪ್ರ. ವಾರ್ತೆ , ಮಾಗಡಿ , ಏ.12
ಬಿಜೆಪಿ ಸರ್ಕಾರ ಅಭಿವೃದ್ಧಿ ಶ್ರೀರಕ್ಷೆವೊಂದರಿಂದಲೇ ಗೆಲವು ಸಾಧಿಸುವುದಾಗಿ ಮಾಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅವರು ಕುದೂರಿನ ಕೋಟಿ ಬೀದಿಯ ಮನೆಯೊಂದರಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಂ. ಧನಂಜಯ, ರಾಮನಹಳ್ಳಿ ಪ್ರಕಾಶ್ ಮತ್ತಿತರರು ಮಾತನಾಡಿದರು. ಟೌನ್ ಬಿಜೆಪಿ ಅಧ್ಯಕ್ಷ ಜಯರಾಮು, ಉಪಾಧ್ಯಕ್ಷ ಟಿ.ಆರ್. ದಯಾನಂದ್, ರವಿಕುಮಾರ್, ಕೃಷ್ಣಪ್ಪ, ಯುವ ಮೋರ್ಚಾ ಜಯರಾಮು, ನಾರಸಂದ್ರ ಮುನಿಯಪ್ಪ, ಸುಗ್ಗನಹಳ್ಳಿ ಗರುಡಪ್ಪ, ರೇಣುಕೇಶ್, ಜಯಣ್ಣ, ವೆಂಕಟೇಶಪ್ಪ, ಗೋಪಿ ಇತರರು ಇದ್ದರು.