ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದಾಸಿಮಯ್ಯ ಜಯಂತ್ಯುತ್ಸವ

Vishwanath S
Updated On : 12 Apr 2013, 11:57 am

ದೊಡ್ಡಬಳ್ಳಾಪುರ: ಇಲ್ಲಿನ ದೇವಾಂಗ ಮಂಡಲಿ(ರಿ) ನೇತೃತ್ವದಲ್ಲಿ ದೇವರ ದಾಸಿಮಯ್ಯ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಆದ್ಯವಚನಕಾರ ದೇವರ ದಾಸಿಮಯ್ಯ ಜಯಂತ್ಯುತ್ಸವ ಮತ್ತು ಚೌಡೇಶ್ವರಿ ಆರತಿ ಉತ್ಸವ, ದೇವಲ ಮಹರ್ಷಿ ವಿಗ್ರಹ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಕಾರ್ಯಕ್ರಮ ಏ.15ರ ಸೋಮವಾರ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ವಿಗ್ರಹ ಪ್ರತಿಷ್ಠಾಪನಾ 19ನೇ ವಾರ್ಷಿಕೋತ್ಸವ ನಡೆಯಲಿದ್ದು, ಹಂಪಿ ಹೇಮಕೂಟ ಗಾಯತ್ರಿ ಪೀಠ ಮಹಾ ಸಂಸ್ಥಾನದ ದಯಾನಂದಪುರಿ ಸ್ವಾಮೀಜಿ ಆಶೀರ್ವಾದಂದಿಗೆ ಅಭಿಷೇಕ, ಗಾಯತ್ರಿ ಹೋಮ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 3 ಗಂಟೆಗೆ ದೇವರ ದಾಸಿಮಯ್ಯ ಅದ್ದೂರಿ ರಾಜಬೀದಿ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ವಿವಿಧ ಸಾಂಸ್ಕೃತಿಕ ತಂಡಗಳೊಂದಿಗೆ ನಡೆಯಲಿದೆ. ಕಾರ್ಯಕ್ರಮಕ್ಕೆ ಗಾಯತ್ರಿ ಪೀಠ ಮಿತ್ರ ಬಳಗ, ಆಂಧ್ರ ದೇವಾಂಗ ಯೂತ್ ಅಸೋಸಿಯೇಶನ್, ಪದ್ಮಶಾಲಿ ಸಂಘ, ತೊಗಟವೀರ ಸಂಘ, ತೆಲುಗು ದೇವಾಂಗ ಸಂಘ, ಪಟ್ಟಸಾಲಿ ಸಂಘ, ಸ್ವಕುಳಸಾಲಿ ಸಂಘ, ಚೌಡೇಶ್ವರಿ ದೇವಾಂಗ ಮಹಿಳಾ ಸಂಘ, ಬಸವಣ್ಣ ಸೇವಾ ಸಮಿತಿ ಸೇರಿದಂತೆ ಅನೇಕ ಸಂಘಟನೆಗಳು ಸಹಕಾರ ನೀಡಿವೆ.

ಮೆಹಂದಿ ಸ್ಪರ್ಧೆ
ದೊಡ್ಡಬಳ್ಳಾಪುರ: ಇಲ್ಲಿನ ಗಾಯತ್ರಿ ಪೀಠ ಮಿತ್ರ ಬಳಗ ಟ್ರಸ್ಟ್ ನೇತೃತ್ವದಲ್ಲಿ ದೇವರ ದಾಸಿಮಯ್ಯ ಜಯಂತ್ಯುತ್ಸವ ಅಂಗವಾಗಿ ಗಾಯತ್ರಿ ಪೀಠ ಮಹಿಳಾ ಬಳಗದ ವತಿಯಿಂದ ಮೆಹಂದಿ ಮತ್ತು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ.
ಏ.14ರಂದು ಬೆಳಗ್ಗೆ 10ರಿಂದ ಮೆಹಂದಿ ಹಾಕುವ ಸ್ಪರ್ಧೆ ಮತ್ತು ಸಂಜೆ 3 ಗಂಟೆಗೆ ರಂಗೋಲಿ ಸ್ಪರ್ಧೆ ನಡೆಯಲಿದೆ. ಹೆಸರುಗಳನ್ನು ನೊಂದಾಯಿಸಲು ಏ.13 ಕಡೆಯ ದಿನವಾಗಿದ್ದು, ಪ್ರತಿ ಹಂತದಲ್ಲೂ 3 ವಿಶೇಷ ಬಹುಮಾನ ಮತ್ತು 3 ಸಮಾಧಾನಕರ ಬಹುಮಾನಗಳಿವೆ. ಆಸಕ್ತರು ಟ್ರಸ್ಟ್ ಪದಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

ವ್ಯಾಕರಣ ತರಬೇತಿ
ದೊಡ್ಡಬಳ್ಳಾಪುರ: ಇಲ್ಲಿನ ಗಾಯತ್ರಿ ಪೀಠ ಮಿತ್ರ ಬಳಗದ ನೇತೃತ್ವದಲ್ಲಿ ಯುವ ಬಳಗ ಮತ್ತು ಮಹಿಳಾ ಬಳಗದ ಸಹಯೋಗದಲ್ಲಿ ಇಂಗ್ಲಿಷ್ ವ್ಯಾಕರಣ ಕಲಿಕೆ ಮತ್ತು ಮಾತುಗಾರಿಕೆ ತರಬೇತಿ ಶಿಬಿರ ಪ್ರೌಢಶಾಲಾ ಮತ್ತು ಕಾಲೇಜು ಹಂತದ ವಿದ್ಯಾರ್ಥಿಗಳಿಗಾಗಿ ನಡೆಯಲಿದೆ. ತರಗತಿಗಳು ಏ.14ರಿಂದ ಆರಂಭವಾಗಲಿದ್ದು, ಬೆಳಗ್ಗೆ 8ರಿಂದ 9 ಮತ್ತು ಸಂಜೆ 5ರಿಂದ 8ರವರೆಗೆ ನಡೆಯಲಿದೆ. ಶಿಬಿರದ ಉದ್ಘಾಟನಾ ಕಾರ್ಯಕ್ರಮ ಟ್ರಸ್ಟ್ ಅಂಗಳದಲ್ಲಿ ಭಾನುವಾರ ಬೆಳಗ್ಗೆ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಎಲ್.ಎನ್.ನಾಗರಾಜ್(9743782402) ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement