ನೆಲಮಂಗಲ: ನಾಲ್ಕು ಕಡೆ ಚೆಕ್ಪೋಸ್ಟ್
ನೆಲಮಂಗಲ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾಧಿಕಾರಿ ಆದೇಶದಂತೆ ಕ್ಷೇತ್ರದಲ್ಲಿ 4 ಕಡೆ ಚೆಕ್ಪೋಸ್ಟ್ ಸ್ಥಾಪಿಸಲಾಗಿದೆ.
ಕ್ಷೇತ್ರದ ಸೋಂಪುರ ಹೋಬಳಿ ಲಕ್ಕೂರು, ತ್ಯಾಮಗೊಂಡ್ಲು ಹೋಬಳಿ ಮುದ್ದಲಿಂಗನಹಳ್ಳಿ, ಕಸಬಾ ಹೋಬಳಿ ರೈಲ್ವೆಗೊಲ್ಲಹಳ್ಳಿ ಹಾಗೂ ಸೋಲೂರಿನಲ್ಲಿ ಚೆಕ್ಪೋಸ್ಟ್ ಸ್ಥಾಪಿಸಲಾಗಿದೆ.
ತಪಾಸಣೆಗೆ ಸೂಚನೆ: ಚೆಕ್ಪೋಸ್ಟ್ಗಳಲ್ಲಿ ನಿಗಾ ಘಟಕಗಳು ಹೆಚ್ಚಿನ ಹಣ, ಅಕ್ರಮ ಮದ್ಯ, ಅನುಮಾನಾಸ್ಪದ ವಸ್ತುಗಳ ಸಾಗಣೆ ಸಂಬಂಧ ನಿಗಾ ವಹಿಸಲಿವೆ. ಅನುಮಾನಾಸ್ಪದವಾಗಿ ಕಂಡು ಬಂದ ವಾಹನ ಹಾಗೂ ವ್ಯಕ್ತಿಗಳನ್ನು ಪರಿಶೀಲಿಸಿ ವಿಚಾರಣೆಗೆ ಒಳಪಡಿಸಲಿವೆ.ವಿಚಾರಣೆ ವೇಳೆ ಸಮರ್ಪಕ ಮಾಹಿತಿ ಹಾಗೂ ದಾಖಲಾತಿಗಳನ್ನು ಒದಗಿಸುವಲ್ಲಿ ಹಣ, ವಸ್ತುಗಳನ್ನು ಜಪ್ತಿ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ವಾಹನ ತಡೆ, ಪರಿಶೀಲನೆ, ವಶಪಡಿಸಿಕೊಳ್ಳುವಿಕೆ ಪ್ರಕ್ರಿಯೆಯ ವಿಡಿಯೋ ಚಿತ್ರೀಕರಣ ಮಾಡಲಾಗುವುದು. ಪ್ರಕರಣದಲ್ಲಿ ಸಿಲುಕುವ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗುತ್ತದೆ. ವಶಪಡಿಸಿಕೊಂಡ ಹಣ, ವಸ್ತುಗಳನ್ನು 24 ತಾಸಿನಲ್ಲಿ ಖಜಾನೆಗೆ ಜಮಾ ಮಾಡಲಾಗುತ್ತದೆ. ವರದಿಯನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಚುನಾವಣಾ ಆಯೋಗಕ್ಕೆ ನೀಡಲಾಗುವುದು.ಕಸಬಾ ಹೋಬಳಿ ತಂಡ ಮುಖ್ಯಾಧಿಕಾರಿ ನೆಲಮಂಗಲ ಯೋಜನಾ ಪ್ರಾಧಿಕಾರದ ಉಪ ನಿರ್ದೇಶಕ ಎನ್.ನಂಜೇಗೌಡ, ತ್ಯಾಮಗೊಂಡ್ಲು ಹೋಬಳಿಗೆ ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ನಂಜುಂಡಸ್ವಾಮಿ, ಸೋಂಪುರ ಹೋಬಳಿಗೆ ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಹರೀಶ(9844495531) ಘಟಕ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುವವರು. ಘಟಕದಲ್ಲಿ 4 ಜನ ಸಿಬ್ಬಂದಿ, ವಿಡಿಯೋಗ್ರಾಫರ್ ಇರುತ್ತಾರೆ.