ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆನೇಕಲ್ ಚುನಾವಣೆ: ಸಂಚಾರಿ ಜಾಗೃತಿ ದಳ

Mainashree
Updated On : 14 Apr 2013, 12:05 pm

ಕ.ಪ್ರ.ವಾರ್ತೆ ಆನೇಕಲ್ಲು ಏ.13
ಆನೇಕಲ್ ವಿಧಾನ ಸಭಾ ಚುನಾವಣೆ ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ನಡೆಯಲು ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಶಿವೇಗೌಡ ತಿಳಿಸಿದ್ದಾರೆ.
ಆನೇಕಲ್ ಪಟ್ಟಣ, ಕಸಬ, ಅತ್ತಿಬೆಲೆ ಹಾಗೂ ಸರ್ಜಾಪುರ ಹೋಬಳಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು  8 ಅಧಿಕಾರಿಗಳ ಸಂಚಾರಿ ಜಾಗೃತ ದಳವನ್ನು ನೇಮಿಸಲಾಗಿದೆ. ಪ್ರತಿ ತಂಡದಲ್ಲೂ  ಒಬ್ಬ ಅಬಕಾರಿ ಅಧಿಕಾರಿ ಹಾಗೂ ನಾಲ್ವರು ಪೊಲೀಸರಿದ್ದು ಸ್ಥಳೀಯ ಪಿಡಿಒ ಅವರನ್ನು ಒಳಗೊಂಡಿರುತ್ತದೆ. ಹಾಗೂ ಈ ತಂಡದ ನೇತೃತ್ವವನ್ನು ಸ್ಥಳೀಯ ಅಧಿಕಾರಿಗೆ ನೀಡಲಾಗಿದೆ. ಈ ತಂಡವು ದಿನದ 24 ಗಂಟೆ ಮಾಹಿತಿ ಸ್ವೀಕಾರ ಹಾಗೂ ಕ್ರಮ ವಹಿಸಲು ಯೋಜಿತರಾಗಿದ್ದು ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬಹುದು ಎಂದಿದ್ದಾರೆ.
ಆನೇಕಲ್ ಕಸಬ: ತಾಲೂಕು ಪಂಚಾಯ್ತಿ ವಿಸ್ತರಣಾಧಿಕಾರಿ ಡಾ. ವೀರಭದ್ರಪ್ಪ, (98807 68148), ಪುರಸಭಾ ಮುಖ್ಯಾಧಿಕಾರಿ ಸುಮಾ, ಅಬಕಾರಿ ಉಪ ನಿರೀಕ್ಷಕ ಪುಟ್ಟರಂಗಯ್ಯ, ಮರಸೂರು ಪಿಡಿಒ ಮುರಳಿ ಹಾಗೂ ನಾಲ್ವರು ಪೊಲೀಸರು.
ಅತ್ತಿಬೆಲೆ ಹೋಬಳಿ: ಜವರೇಗೌಡ, ವಲಯ ಅರಣ್ಯಾಧಿಕಾರಿ (90084 73212), ವೀರಪ್ಪ, ಅಬಕಾರಿ ಉಪನಿರೀಕ್ಷಕ, ಜೋಸೇಫ್ ಪಿಡಿಒ ಚಂದಾಪುರ, ನಾಲ್ವರು ಪೊಲೀಸರು.
ಸರ್ಜಾಪುರ ಹೋಬಳಿ: ಪ್ರಸನ್ನ ಕುಮಾರ್ ಎಇಇ ಜಿಲ್ಲಾ ಪಂಚಾಯ್ತಿ(87624 07584) ನರಸಿಂಹರಾಜು ಅಬಕಾರಿ ಉಪನಿರೀಕ್ಷಕ, ಸೂರ್ಯನಗರ ಚಂದಾಪುರ, ಗಂಗಾಧರ್ ಪಿಡಿಒ ಸರ್ಜಾಪುರ ಹಾಗೂ ನಾಲ್ವರು ಪೊಲೀಸರು.
ಇದಲ್ಲದೇ ವಿವಿಧ ಇಲಾಖೆಗಳ ಜಾಗೃತ ದಳದವರು ಅಭ್ಯರ್ಥಿ ಹಾಗೂ ಪಕ್ಷದ ವೆಚ್ಚಗಳ ಬಗ್ಗೆ ನಿಗಾ ವಹಿಸಲು ಯೋಜಿತರಾಗಿದ್ದಾರೆ.  ಅಭ್ಯರ್ಥಿಗಳು ಪ್ರಚಾರಕ್ಕಾಗಿ ಪರವಾನಗಿ ಪಡೆದು ನಿರ್ದಿಷ್ಟ ಸಮಯ ಹಾಗೂ ಸ್ಥಳವನ್ನು ನಮೂದಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದೂ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement