ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕನಕಪುರ: ಬಿಜೆಪಿಯಿಂದ ಬಿ. ನಾಗರಾಜು ಸ್ಪರ್ಧೆ

Mainashree
Updated On : 14 Apr 2013, 12:05 pm

ಕ.ಪ್ರ.ವಾರ್ತೆ ಕನಕಪುರ ಏ.13
ಕಳೆದ ಇಪ್ಪತೈದು ವರ್ಷಗಳಿಂದ ಅನೇಕ ಪ್ರಮುಖ ಸಚಿವ ಸ್ಥಾನವನ್ನು ಅಲಂಕರಿಸಿದ್ದವರು ಹಾಗೂ ಈ ಸಾಲಿನಲ್ಲಿ ಕನಕಪುರದ ಸರ್ವತೋಮುಖ ಅಭಿವೃದ್ಧಿ ನಡೆಸಿದ್ದೇನೆಂದು ಕೊಚ್ಚಿಕೊಳ್ಳುತ್ತಿರುವ ಅಭ್ಯರ್ಥಿಗಳ ನಡುವೆ, ಜನಪರ, ಸ್ವಾಭಿಮಾನಿ ಬಿಜೆಪಿ ಪಕ್ಷದ ಮೂಲಕ ಸ್ಪರ್ಧಿಸುತ್ತಿರುವುದಾಗಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಬಿ. ನಾಗರಾಜು ಹೇಳಿದ್ದಾರೆ.
ಅವರು ತಮ್ಮ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸುವ ಕುರಿತು ಮಾತನಾಡುತ್ತಿದ್ದರು. ಏಪ್ರಿಲ್ 15 ರಂದು ಬೆಳಗ್ಗೆ ಇಲ್ಲಿನ ಐಯ್ಯಪ್ಪಸ್ವಾಮಿ ದೇವಾಲಯದಿಂದ ಮೆರವಣಿಗೆಯಲ್ಲಿ ಹೊರಟು ನಾಮಪತ್ರ ಸಲ್ಲಿಸುವುದಾಗಿ ನಾಗರಾಜು ತಿಳಿಸಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಗನ್ನಾಥ್ ಮಾತನಾಡುತ್ತಾ, ಸಮರ್ಥ ಸಂಘಟಕ ಬಿ.ನಾಗರಾಜು ಕನಕಪುರ ಕ್ಷೇತ್ರದ ಅಧಿಕೃತ ಅಭ್ಯರ್ಥಿಯಾಗಿದ್ದು, ಪಕ್ಷದಿಂದ ಯಾವುದೇ ಚರ್ಚೆಗಳಿಲ್ಲದೆ, ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆಗೊಂಡಿದ್ದಾರೆ ಎಂದರು. ಕನಕಪುರದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ 650 ಕೋಟಿ ಅನುದಾನ ನೀಡಿದೆ. ಉಚಿತ ನಿವೇಶನಗಳು, ವಾಜಪೇಯಿ ವಸತಿ, ರಸ್ತೆ ಅಗಲೀಕರಣ ಮೊದಲಾದ ಎಲ್ಲಾ ಕಾರ್ಯಗಳಲ್ಲಿಯೂ ಬಿಜೆಪಿ ಕನಕಪುರದ ಶಾಸಕರಿಗೆ ನೆರವು ನೀಡಿದೆ. ಸರ್ಕಾರದ ನೆರವಿಲ್ಲದೆ ತಾವೊಬ್ಬರೇ ಅಭಿವೃದ್ಧಿ ಮಾಡಲಾಗುತ್ತಿರವಿಲ್ಲ ಎಂದು ನಾಗರಾಜ್ ನುಡಿದರು. ಸಭೆಯಲ್ಲಿ ಬಿಜೆಪಿ ಮುಖಂಡರಾದ ರವೀಂದ್ರ ಬಾಬು, ಆನಂದ್, ಶ್ರೀನಿವಾಸ್, ಕುಮಾರ್, ಆನಮಾನಹಳ್ಳಿನಾಗರಾಜು, ನಾಗಾನಂದ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement