ದೊಡ್ಡಬಳ್ಳಾಪುರದಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ
ದೊಡ್ಡಬಳ್ಳಾಪುರ: ಇಲ್ಲಿನ ಮಹಿಳಾ ಸಮಾಜ ಕಸ್ತೂರಿ ಬಾ ಶಿಶು ವಿಹಾರ ನೇತೃತ್ವದಲ್ಲಿ ಸಂಜೀವಿನಿ ಯೋಗಾ ಕೇಂದ್ರ ಸಹಯೋಗದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ 2013-14 ಏ.17ರಿಂದ 28ರವರೆಗೆ ಮಹಿಳಾ ಸಮಾಜದಲ್ಲಿ ನಡೆಯಲಿದೆ. ಬೇಸಿಗೆ ಶಿಬಿರದ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕರಾಟೆ, ಯೋಗ, ಧ್ಯಾನ, ಭರತನಾಟ್ಯ, ಚಿತ್ರಕಲೆ, ನಾಟಕ, ಲಘು ಸಂಗೀತ, ಸ್ಪೋಕನ್ ಇಂಗ್ಲಿಷ್ ಸೇರಿದಂತೆ ಅನೇಕ ವಿಷಯಗಳಿಗೆ ಶಿಬಿರದಲ್ಲಿ ಒತ್ತು ನೀಡಲಾಗಿದೆ. ಹೆಚ್ಚಿನ ವಿವರಗಳಿಗೆ ಮಹಿಳಾ ಸಮಾಜವನ್ನು ಸಂಪರ್ಕಿಸಬಹುದು.