ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸುದ್ದಿ ಸಂಕ್ಷೇಪ

Mainashree
Updated On : 14 Apr 2013, 12:06 pm

ಇಂದು ಮಹಿಳಾ ಸಂವೇದನೆ-ಸಂವಾದ
ರಾಮನಗರ: ಕರ್ನಾಟಕ ಜಾನಪದ ಪರಿಷತ್ತಿನಿಂದ ಜಾನಪದ ಲೋಕದಲ್ಲಿ ಏ.14ರಂದು ಯುಗಾದಿ ಸಂಭ್ರಮ ಮತ್ತು ಮಹಿಳಾ ಸಂವೇದನೆ-ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿದೆ. ಹೆಣ್ಣುಮಕ್ಕಳಿಗೆ ಅಣ್ಣೆಕಲ್ಲಾಟ, ಮಹಿಳೆಯರಿಗೆ ಜನಪದ ಚಿತ್ರಕಲೆ, ಚುಕ್ಕಿ, ಬಿಳಿರಂಗೋಲೆ ಸ್ಪರ್ಧೆ ಆಯೋಜಿಸಲಾಗಿದೆ.  ಕಾರ್ಯಕ್ರಮವನ್ನು ಜಾನಪದ ಪರಿಷತ್ತಿನ ನಿರ್ದೇಶಕ ಹಿ.ಶಿ.ರಾಮಚಂದ್ರಗೌಡ ಉದ್ಘಾಟಿಸುವರು. ಅಧ್ಯಕ್ಷ ಟಿ.ತಿಮ್ಮೇಗೌಡ ಅಧ್ಯಕ್ಷತೆ ವಹಿಸುವರು. ಮ್ಯಾನೇಜಿಂಗ್ ಟ್ರಸ್ಟಿ ಇಂದಿರಾ ಬಾಲಕೃಷ್ಣ, ಜಾನಪದ ವಿದ್ವಾಂಸೆ ಗಾಯತ್ರಿ ನಾವಡ, ಗೌರವ ಕಾರ್ಯದರ್ಶಿ ರಾಜೇಗೌಡ ಭಾಗವಹಿಸುವರು.  ಜಾಗತೀಕರಣದಿಂದ ಬದಲಾಗುತ್ತಿರುವ ವಾತಾವರಣದಲ್ಲಿ ಗ್ರಾಮೀಣ ಮಹಿಳೆಯ ಸ್ಥಾನ-ಮಾನ - ಜನಪದ ಕಲಾವಿದೆಯರ ಮುಂದಿನ ದಾರಿ ವಿಷಯ ಕುರಿತು ಸಂವಾದ ನಡೆಯಲಿದೆ.  ಜಾನಪದ ವಿದ್ವಾಂಸರಾದ ಡಾ.ಸಂಧ್ಯಾರೆಡ್ಡಿ, ಡಾ.ಎಂ.ಸುಮಿತ್ರ, ಡಾ.ಸುಜಾತ ಅಕ್ಕಿ, ಡಾ.ನೇತ್ರಾವತಿಗೌಡ, ವಿಜಯಲಕ್ಷ್ಮೀ ಮಾನಾಪುರ, ನಿರ್ಮಲ ಎಲಿಗಾರ್, ಡಾ.ಗಾಯಿತ್ರಿ ನಾವಡ, ಸಂವಾದದಲ್ಲಿ ಭಾಗವಹಿಸುವರು. ಮಂಡ್ಯದ ಬುರ್ರಕಥಾ, ಪಟ-ಪೂಜಾಕುಣಿತ, ತತ್ವ ಪದ, ಚಿತ್ರದುರ್ಗದ ಗೊರವಿಯರ ಕುಣಿತ, ಬೆಳಗಾಂನ ಗೀಗೀಪದ, ರಾಮನಗರದ ತಂಬೂರಿ ಪದಗಳ ಕಲಾಪ್ರದರ್ಶನ ನಡೆಯಲಿದೆ.
ಇಂದು ಅಂಬೇಡ್ಕರ್ ಜನ್ಮದಿನಾಚರಣೆ
ಮಾಗಡಿ: ಸಂವಿಧಾನ ಶಿಲ್ಪಿ, ಭಾರತ ರತ್ನ  ಡಾ.ಬಿ.ಆರ್.ಅಂಬೇಡ್ಕರ್  ಅವರ ಜನ್ಮದಿನಾಚರಣೆಯನ್ನು ಏ.14 ರಂದು  ಭಾನುವಾರ ಬೆಳಿಗ್ಗೆ 10.30ಕ್ಕೆ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರೂ ಆಗಿರುವ ತಹಸೀಲ್ದಾರ್  ಡಾ.ಬಿ.ಆರ್. ಹರೀಶ್ ನಾಯಕ್ ತಿಳಿಸಿದ್ದಾರೆ.
ಇಂದು ಚರ್ಮರೋಗ ತಪಾಸಣೆ ಶಿಬಿರ
ದೊಡ್ಡಬಳ್ಳಾಪುರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್ ಮತ್ತು ಲಯನ್ಸ್ ಚಾರಿಟೀಸ್ ಟ್ರಸ್ಟ್ ನೇತೃತ್ವದಲ್ಲಿ ಉಚಿತ ಚರ್ಮರೋಗ ತಪಾಸಣೆ ಮತ್ತು ಔಷಧಿ ವಿತರಣೆ ಶಿಬಿರ ಏ.14ರ ಭಾನುವಾರ ಬೆಳಗ್ಗೆ 9.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಲಯನ್ಸ್ ಭವನದಲ್ಲಿ ನಡೆಯಲಿದೆ. ಎಸ್.ಡಿ.ಪರ್ವತಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶ್ರೀಸತ್ಯಸಾಯಿ ಚರ್ಮ ಮತ್ತು ಸುರೂಪ ಚಿಕಿತ್ಸಾ ಕೇಂದ್ರದ ಚರ್ಮರೋಗ ತಜ್‌ಞ ಡಾ.ಟಿ.ಸಿ.ಶಿವಯೋಗಿ ಮತ್ತು ತಂಡದವರು ರೋಗಿಗಳ ತಪಾಸಣೆ ನಡೆಸಲಿದ್ದಾರೆ. ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಸಿ.ವೆಂಕಟೇಶ್ ಅಧ್ಯಕ್ಷತೆ ವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement