ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪತ್ರಕರ್ತರ ಕಚೇರಿಯಲ್ಲಿ ಅಂಬೇಡ್ಕರ್ ಜನ್ಮ ದಿನಾಚರಣೆ

Mainashree
Updated On : 15 Apr 2013, 12:39 pm

ಕ.ಪ್ರ. ವಾರ್ತೆ ಮಾಗಡಿ ಏ.14
ಸರ್ವಶ್ರೇಷ್ಠ ಸಂವಿಧಾನ ಕೊಟ್ಟ ಮಹಾನ್ ಮಾನವತಾವಾದಿ ಡಾ.ಬಿ.ಆರ್. ಅಂಬೇಡ್ಕರ್ ಎಂದು ಶಿಕ್ಷಕ ಮಾರಣ್ಣ ಹೇಳಿದರು. ಅವರು ಪಟ್ಟಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ  ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ 122ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿ, ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ನಾವೆಲ್ಲರು ಅಳವಡಿಸಿಕೊಳ್ಳೋಣ ಎಂದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಎಲ್.ಮಹಾಲಿಂಗಯ್ಯ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಹಿರಿಯರಾದ ಬಿ.ಎಚ್.ಮಹೇಶಯ್ಯ, ಪತ್ರಕರ್ತ ಗಂಗಾಧರ್, ನರಸಿಂಹಮೂರ್ತಿ,ಟಿ.ಎಂ.ಶ್ರೀನಿವಾಸ್, ರಂಗನಾಥಬಾಬು, ತಗ್ಗೀಕುಪ್ಪೆ ರಾಮು, ಇತರರು  ಮಾತನಾಡಿದರು. ಹಳ್ಳಿ ಮನೆ ಹನುಮಂತಯ್ಯ, ಮಹಮದ್  ಅಶ್ರಫ್, ಎಂ.ಎಸ್.ಸಿದ್ದಲಿಂಗೇಶ್ವರ್,  ಕುದೂರು ಮಂಜುನಾಥ್, ಜನ ಸಂಗಾತಿ ನಾಗರಾಜು, ನಾಗರಾಜ ಗುಪ್ತಾ  ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement