ಸುದ್ದಿ ಸಂಕ್ಷೇಪ
ಇಂದು ದೇವರ ದಾಸಿಮಯ್ಯ ಜಯಂತ್ಯುತ್ಸವ
ದೊಡ್ಡಬಳ್ಳಾಪುರ: ಇಲ್ಲಿನ ದೇವಾಂಗ ಮಂಡಲಿ(ರಿ) ನೇತೃತ್ವದಲ್ಲಿ ಶ್ರೀದೇವರ ದಾಸಿಮಯ್ಯ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಆದ್ಯವಚನಕಾರ ದೇವರ ದಾಸಿಮಯ್ಯ ಜಯಂತ್ಯುತ್ಸವ ಮತ್ತು ಚೌಡೇಶ್ವರಿ ಅಮ್ಮನವರ ಆರತಿ ಉತ್ಸವ, ದೇವಲ ಮಹರ್ಷಿ ವಿಗ್ರಹ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಕಾರ್ಯಕ್ರಮ ಏ.15ರ ಸೋಮವಾರ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ವಿಗ್ರಹ ಪ್ರತಿಷ್ಠಾಪನಾ 19ನೇ ವಾರ್ಷಿಕೋತ್ಸವ ನಡೆಯಲಿದ್ದು, ಹಂಪಿ ಹೇಮಕೂಟ ಗಾಯತ್ರಿ ಪೀಠ ಮಹಾ ಸಂಸ್ಥಾನದ ದಯಾನಂದಪುರಿ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಅಭಿಷೇಕ, ಗಾಯತ್ರಿ ಹೋಮ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 3 ಗಂಟೆಗೆ ಶ್ರೀದೇವರ ದಾಸಿಮಯ್ಯ ಅದ್ದೂರಿ ರಾಜಬೀದಿ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ವಿವಿಧ ಸಾಂಸ್ಕೃತಿಕ ತಂಡಗಳೊಂದಿಗೆ ನೆರವೇರಲಿದೆ.
ಮಿತ್ರ ಮಂಡಲಿಯಿಂದ ಕಾರ್ಯಕ್ರಮ: ಇಲ್ಲಿನ ಶಾಂತಿನಗರ 7ನೇ ಕ್ರಾಸ್‌ನಲ್ಲಿರುವ ಶ್ರೀದೇವರ ದಾಸಿಮಯ್ಯ ಮಿತ್ರ ಮಂಡಲಿ ನೇತೃತ್ವದಲ್ಲಿ 4ನೇ ವರ್ಷದ ಶ್ರೀದೇವರ ದಾಸಿಮಯ್ಯ ಜಯಂತ್ಯುತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಂದು ಪ್ರಕಟಣೆ ತಿಳಿಸಿದೆ.
ಅಲ್ಲಮ ಪ್ರಭು ಜಯಂತಿ
ವಿಜಯಪುರ: ಅಲ್ಲಮಪ್ರಭು ತಮ್ಮ ವಚನಗಳ ಮೂಲಕ ಜಡಮನಸ್ಸಿನಲ್ಲಿಯೂ ಭಕ್ತಿಯನ್ನು ಮೂಡಿಸುತ್ತಿದ್ದರು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಸಾಪ ಉಪಾಧ್ಯಕ್ಷ ಎಂ. ರುದ್ರೇಶ್ ಮೂರ್ತಿ ತಿಳಿಸಿದರು. ಅವರು ಪಟ್ಟಣದ ಗಾಂಧಿ ಚೌಕದಲ್ಲಿರುವ ಕಸಾಪ ಕಚೇರಿಯಲ್ಲಿ ಏರ್ಪಡಿಸಿದ್ದ ಅಲ್ಲಮ ಪ್ರಭು ಜಯಂತಿ ಮತ್ತು ವಸಂತೋತ್ಸವ ಕಾರ್ಯಕ್ರಮದಲ್ಲಿ ಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆ ಎಂಬ ವಿಷಯ ಬಗ್ಗೆ ಉಪನ್ಯಾಸ ನೀಡುತ್ತಿದ್ದರು. ಅಲ್ಲಮ ಪ್ರಭು ರಚಿಸಿರುವ ವಚನಗಳಲ್ಲಿ ಮೌಲ್ಯಗಳಿರುತ್ತಿದ್ದವು. ಶಿವ ಶರಣರ ವಚನಗಳು ಬೇರೆ ಬೇರೆ ಭಾಷೆಗಳಲ್ಲಿ ತರ್ಜುಮೆಯಾಗುತ್ತಿರುವುದು ಶ್ಲಾಘನೀಯ ಎಂದರು. ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕವಿ ಮ.ಸುರೇಶ್ ಬಾಬು ಮಾತನಾಡಿದರು. ಇದೇ ಸಂದರ್ಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ರಂಗಕಲಾವಿದ, ಹಾರೋಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದ ಎನ್.ರಾಜ್‌ಗೋಪಾಲ್ ಅವರನ್ನು ಅಭಿನಂದಿಸಲಾಯಿತು. ವಚನಜ್ಚಿಂತಕ ಮ.ಜಯದೇವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕವಿಗಳಾದ ಸಿ.ಎಂ.ವೀರಣ್ಣ, ಮ.ಸುರೇಶ್ ಬಾಬು, ರಘುರಾಮ್,ನಾಗರಾಜ್, ಮೂಡಲಪ್ಪ, ಚಂದ್ರಶೇಖರ್ ಹಡಪದ್, ಶ್ರೀನಿವಾಸ್, ಎಚ್.ಗವಿಸಿದ್ದಯ್ಯ ಸ್ವರಚಿತ ಕವನಗಳನ್ನು ವಾಚಿಸಿದರು. ಅಧ್ಯಕ್ಷತೆಯನ್ನು ವಚನ ಸಾಹಿತ್ಯ ಚಿಂತಕರಾದ ಬಸವರಾಜೇಂದ್ರಪ್ಪ ವಹಿಸಿದ್ದರು. ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಚಂದ್ರಶೇಖರ್ ಹಡಪದ್, ಬೆಂ.ಗ್ರಾ.ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಚಿ.ಮಾ.ಸುಧಾಕರ್, ಜೆ.ಆರ್. ಮುನಿವೀರಣ್ಣ, ಆಂಜಿನಪ್ಪ ಮತ್ತಿತರರು ಉಪಸ್ಥಿತರಿದ್ದರು.