ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಿಡಿಲು ಬಡಿದು 10 ಕುರಿಗಳ ಸಾವು

Vishwanath S
Updated On : 16 Apr 2013, 12:37 pm

ವಿಜಯಪುರ: ಪಟ್ಟಣ ಸಮೀಪದ ವೆಂಕಟೇನಹಳ್ಳಿಯ ಮುನಿಕೃಷ್ಣಪ್ಪ ಎಂಬುವವರಿಗೆ ಸೇರಿದ 10 ಕುರಿಗಳು ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಗ್ರಾಮದಲ್ಲಿ ಮುನಿಕೃಷ್ಣಪ್ಪ ಅವರ 25 ಕುರಿಗಳನ್ನು ಮೈತ್ರಿ ಎಂಬ ಮಹಿಳೆ ಸೋಮವಾರ ಮಧ್ಯಾಹ್ನ 3ಗಂಟೆ ಸಮಯದಲ್ಲಿ ಮೇಯಿಸುತ್ತಿದ್ದು ದಿಢೀರನೆ ಸಿಡಿಲು ಬಡಿದ ಪರಿಣಾಮ 10 ಕುರಿಗಳು ಸ್ಥಳದಲ್ಲೇ ಮೃತಪಟ್ಟರೆ, 6ಕುರಿಗಳು ಕಾಲಿನ ಸ್ವಾಧೀನ ಕಳೆದುಕೊಂಡಿವೆ. ಮಹಿಳೆಗೂ ಸಿಡಿಲು ಬಡಿದ ಪರಿಣಾಮ ಕೈ ಕಾಲು ಸ್ವಾಧೀನವಿಲ್ಲದೆ ಕಿವಿ ಕೆಳದಂತಾಗಿದೆ. ಚಿಕಿತ್ಸೆಗಾಗಿ ವಿಜಯಪುರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಜಯಪುರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಮಧ್ಯಾಹ್ನ 3ಗಂಟೆಯಿಂದ ಬಿರುಗಾಳಿಯಿಂದ ಕೂಡಿದ ಧಾರಕಾರ ಮಳೆ 1ಗಂಟೆ ಕಾಲ ಸುರಿಯಿತು. ಬಿರುಗಾಳಿಯಿಂದ  ಕೆಲವು ಕಡೆ ಮೇಲ್ಚಾವಣಿಯ ಶೀಟುಗಳು ಗಾಳಿಯಲ್ಲಿ ತೇಲಾಡಿದ ಘಟನೆ ನಡೆಯಿತು.

ಜೆಡಿಎಸ್‌ನಿಂದ ಪಿಳ್ಳಮುನಿಶಾಮಪ್ಪ ನಾಮಪತ್ರ ಸಲ್ಲಿಕೆ
ದೇವನಹಳ್ಳಿ: ದೇವನಹಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ನ ಅಧಿಕೃತ ಅಭ್ಯರ್ಥಿ ಪಿಳ್ಳಮುನಿಶಾಮಪ್ಪ ಸೋಮವಾರ ತಮ್ಮ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಸಂಸದರು ಹಾಗೂ ರಾಜ್ಯ ಜೆಡಿಎಸ್ ಮುಖಂಡರಾದ ಸಿ.ನಾರಾಯಣಸ್ವಾಮಿ, ತಾಲೂಕು ಜೆಡಿಎಸ್ ಅಧ್ಯಕ್ಷ ಮುನಿಶಾಮಯ್ಯ, ಕಾರ್ಯಾಧ್ಯಕ್ಷ ಆರ್.ಮುನೇಗೌಡ, ತೂಬಗೆರೆ ಹೋಬಳಿ ಮುಖಂಡರಾದ ಅಪ್ಪಯ್ಯಣ್ಣ ಹಾಜರಿದ್ದರು. ಅಭ್ಯರ್ಥಿ ಪಿಳ್ಳಮುನಿಶಾಮಪ್ಪ ತಮ್ಮ ಬೆಂಬಲಿಗರು ಹಾಗೂ ತಾಲೂಕು ಜೆಡಿಎಸ್ ಕಾರ್ಯಕರ್ತರೊಂದಿಗೆ ಕೋಡಗುರ್ಕಿ ಬಳಿಯ ಕತ್ತಿ ಮಾರಮ್ಮ ದೇವಾಲಯದಲ್ಲಿ ಹಾಗೂ ದೇವನಹಳ್ಳಿಯ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ ನಂತರ ಸಾವಿರಾರು ಮಂದಿ ಕಾರ್ಯಕರ್ತರೊಂದಿಗೆ ಮಿನಿವಿಧಾನಸೌಧದ ಬಳಿ ಆಗಮಿಸಿದರು. ಈ ಸಂಧರ್ಭದಲ್ಲಿ  ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಎಂ.ಬೀರಪ್ಪ, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ದೊಡ್ಡಸಣ್ಣೆ ಮುನಿರಾಜು, ತಾಲೂಕು ಕಾರ್ಯದರ್ಶಿ ಜಿ.ಎ.ರವೀಂದ್ರ, ಚನ್ನರಾಯಪಟ್ಟಣ, ಕುಂದಾಣ , ಕಸಬ ಘಟಕಗಳ ಹೋಬಳಿ ಅಧ್ಯಕ್ಷರು ಪುರಸಭೆಯ ಸದಸ್ಯರಾದ ವೈ.ಸಿ. ಸತೀಶ್‌ಕುಮಾರ್, ಜೆಡಿಎಸ್ ಪುರಸಭಾ ಸದಸ್ಯರು ಹಾಗೂ ದಲಿತ ಒಕ್ಕೂಟದ ಬುಳ್ಳಹಳ್ಳಿ ರಾಜಪ್ಪ , ಮಾದಿಗ ದಂಡೋರ ತಾಲೂಕು ಅಧ್ಯಕ್ಷರಾದ ಜಿ.ಮಾರಪ್ಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement