ಜಿಲ್ಲಾಧಿಕಾರಿ ಸೂಚನೆ
ರಾಮನಗರ: 2013ರ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಜಿಲ್ಲಾ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ಮತಗಟ್ಟೆ ಅಧ್ಯಕ್ಷಾಧಿಕಾರಿ(ಪಿ.ಆರ್.ಓ) ಹಾಗೂ ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಯಾಗಿ(ಎ.ಪಿ.ಆರ್.ಓ) ನೇಮಕಗೊಂಡಿರುವವರಿಗೆ ಈಗಾಗಲೇ ನೇಮಕಾತಿ ಆದೇಶಗಳು ಜಾರಿಯಾಗಿರುತ್ತದೆ. ಪಿಆರ್ಓ ಮತ್ತು ಎಪಿಆರ್ಓಗಳಿಗೆ ಏ.22 ಮತ್ತು 23ರಂದು ಚುನಾವಣಾ ತರಬೇತಿ ನಡೆಯಲಿದ್ದು, ತರಬೇತಿಗೆ ತಪ್ಪದೆ ಹಾಜರಾಗುವಂತೆ ಜಿಲ್ಲಾಧಿಕಾರಿ ನವೀನ್ರಾಜ್ಸಿಂಗ್ ತಿಳಿಸಿದ್ದಾರೆ. ತಪ್ಪಿದ್ದಲ್ಲಿ ಆರ್ಪಿ ನಿಯಮ 1951ರಂತೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಅಗತ್ಯವಿದ್ದಲ್ಲಿ ಸರ್ಕಾರಿ ಸೇವೆಯಿಂದ ಅಮಾನತು ಹಾಗೂ ವಜಾಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.