ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಜೆಡಿಯು ನಡಿಗೆ, ಹಳ್ಳಿಯ ಕಡೆಗೆ'

Mainashree
Updated On : 17 Apr 2013, 12:39 pm

ಕ.ಪ್ರ. ವಾರ್ತೆ  ಮಾಗಡಿ  ಏ.16
ಜೆಡಿಯು ನಡಿಗೆ, ಹಳ್ಳಿಯ ಕಡೆಗೆ ಎಂಬ ಘೋಷಣೆಯೊಂದಿಗೆ ಯುವಕರನ್ನು ರಾಜ್ಯದ ಬಹುದೊಡ್ಡ ಶಕ್ತಿಯನ್ನಾಗಿಸುವುದೇ ನಮ್ಮ ಪಕ್ಷದ ಗುರಿ ಎಂದು ಜೆಡಿಯು ಅಭ್ಯರ್ಥಿ ಕೆ. ರಮೇಶ್ ನುಡಿದರು. ಅವರು ಮಾಗಡಿ ವಿಧಾನ ಸಭಾ ಕ್ಷೇತ್ರಕ್ಕೆ  ಜೆಡಿಯುನಿಂದ ಮಂಗಳವಾರ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದ ಅಭಿವೃದ್ಧಿ ಯುವಶಕ್ತಿಯಿಂದ ಸಾಧ್ಯವಿದೆ. ಮತದಾರರು ಒಮ್ಮೆ ಯವಶಕ್ತಿ ಕೈಗೆ ರಾಜ್ಯದ ಆಡಳಿತ ನೀಡಬೇಕು. ನಾನು ಯುವಕನಾಗಿದ್ದು, ಕ್ಷೇತ್ರ ಅಭಿವೃದ್ಧಿಗೆ ಇಚ್ಛಾಶಕ್ತಿ ಹೊಂದಿದ್ದೇನೆ.  ಯುವಶಕ್ತಿ ವಿಧಾನ ಸೌಧದ ಕುಳಿತು ಹಳ್ಳಿಗಳ ಯುವಶಕ್ತಿಗೆ ಶಕ್ತಿ ತುಂಬುವ ಮೂಲಕ ರಾಷ್ಟ್ರದಲ್ಲಿಯೇ ಮಾದರಿ ರಾಜ್ಯವನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಜೆಡಿಯು ಸಲಹಾ ಸಮಿತಿ ಸದಸ್ಯ ಅಂಜನಗೌಡ ಮತನಾಡಿದರು. ಜೆಡಿಯು ಹಿಂದುಳಿದ ವರ್ಗಗಳ ಉಪಾಧ್ಯಕ್ಷ  ಶಿವಯ್ಯ, ಕಾಳಿಯಪ್ಪ ಹಾಗೂ ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement