ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಿರುಮಳೆ, ಗಾಳಿಯಿಂದ ಭಾರಿ ನಷ್ಟ

Mainashree
Updated On : 17 Apr 2013, 12:40 pm

ಕನಕಪುರ: ಕನಕಪುರ ತಾಲೂಕು ಸಾತನೂರು ಹೋಬಳಿಯಲ್ಲಿ ನಿನ್ನೆ ರಾತ್ರಿ ಸುರಿದ ಬಿರುಮಳೆ ಹಾಗೂ ಗಾಳಿಯಿಂದಾಗಿ ಹಲವಾರು ಗ್ರಾಮಗಳಲ್ಲಿ ಹತ್ತಾರು ಮನೆಗಳ ಛಾವಣಿ ಹಾರಿ ಹೊಗಿದೆ. ಹೊಲಗದ್ದೆಗಳಲ್ಲಿ ಫಸಲು ನೆಲಕಚ್ಚಿದ್ದು, ಮರಗಳು ಧರೆಗುರುಳಿದೆ, ಬರ ಹಾಗೂ ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಬಿರುಮಳೆ ಸ್ವಲ್ಪ ಸಮಾಧಾನ ನೀಡಿದರೂ ಲಕ್ಷಾಂತರ ರು. ನಷ್ಟ ಸಂಭವಿಸಿದೆ. ಸಾತನೂರು ಹೋಬಳಿಯ ಕೆ.ಪಾಳ್ಯ, ಅಚ್ಚಲು, ಕಚ್ಚುವನಹಳ್ಳಿ,ಅರೇಹೊಸಳ್ಳಿ, ಕಾಳೇಗೌಡನದೊಡ್ಡಿ, ಅತ್ತಿಹಳ್ಳಿ ಮೊದಲಾದ ಗ್ರಾಮಗಳಲ್ಲಿ ಗುಡುಗು, ಸಿಡಿಲು, ಮಿಂಚು, ಗಾಳಿ, ಮಳೆಯಿಂದಾಗಿ ಅನೇಕ ಮನೆಗಳ ಗೋಡೆಗಳು ಕುಸಿದಿವೆ.  ಮನೆಗಳ ಛಾವಣಿಗಳು ಗಾಳಿಗೆ ಹಾರಿ ಹೋಗಿವೆ. ಹತ್ತಾರು ಮೇಕೆ,ಕುರಿಗಳು ಸಾವನ್ನಪ್ಪಿವೆ, ಕೆಲವರ ಎಲೆತೋಟ ನಾಶವಾಗಿದ್ದು ಲಕ್ಷಾಂತರ ರು. ನಷ್ಟ ಸಂಭವಿಸಿದೆ. ತಾಲೂಕು ಆಡಳಿತ ನಷ್ಟಕ್ಕೀಡಾದ ರೈತರಿಗೆ ಸೂಕ್ತವಾದ ಪರಿಹಾರ ವಿತರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement