ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಭಿವೃದ್ಧಿಯೇಶ್ರೀರಕ್ಷೆ: ಬಾಲಕೃಷ್ಣ

Mainashree
Updated On : 18 Apr 2013, 1:13 am

ಮಾಗಡಿ:  ನಾನು ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳಿಂದ ನನ್ನ ಗೆಲುವು ನಿಶ್ಚಿತ ಎಂದು ಜೆಡಿಎಸ್  ಅಭ್ಯರ್ಥಿ, ಶಾಸಕ ಎಚ್.ಸಿ. ಬಾಲಕೃಷ್ಣ ನುಡಿದರು.  ಅವರು ಮಾಗಡಿ ವಿಧಾನ ಸಭಾ ಕ್ಷೇತ್ರದ ನೇತೇನಹಳ್ಳಿ, ಮಾನಗಲ್,ತೂಬಿನಕೆರೆ,  ಬಾಳೇನಹಳ್ಳಿ, ಏಳಿಗೇಹಳ್ಳಿ, ಮತ್ತೀಕರೆ ಇತರೆಡೆ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಮಾಡುತ್ತಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಳೆದ 15 ವರ್ಷಗಳಿಂದ ನನ್ನನ್ನು ಮನೆ ಮಗನಂತೆ ಕ್ಷೇತ್ರದ ಜನತೆ ಕಂಡಿದ್ದಾರೆ. ಈ ಬಾರಿಯೂ ನನ್ನನ್ನೇ ಮತದಾರರು ಗೆಲ್ಲಿಸುವುದು ನಿಶ್ಚಿತ ಎಂದರು. ಜಿಲ್ಲಾ ಪಂಚಾಯ್ತತಿ ಅಧ್ಯಕ್ಷ ಕೆ. ಮುದ್ದುರಾಜ ಯಾದವ್ ಮಾತನಾಡಿದರು. ತಾ.ಪಂ. ಅಧ್ಯಕ್ಷ ಬಿ.ಟಿ. ವೆಂಕಟೇಶ್, ಮಾಜಿ  ಸದಸ್ಯ ಪರಮೇಶ್, ಮಂಜುನಾಥ್, ಗ್ರಾ.ಪಂ. ಮಾಜಿ ಸದಸ್ಯ ಯಾಲಕಯ್ಯ, ರಾಜಣ್ಣ, ಕುಮಾರ್, ತಾ.ಪಂ. ಸದಸ್ಯ ಭಾರತಿ ಮಹದೇವಯ್ಯ, ಪೂಜಾರಿ ಪಾಳ್ಯದ ಕೃಷ್ಣಮೂರ್ತಿ, ಶಂಕರ, ಮೂರ್ತಿ, ನಾಗರಾಜು, ಮಂಜುನಾಥ್, ಕಲ್ಯ ಚಿಕ್ಕಣ್ಣ  ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement