ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸುದ್ದಿ ಸಂಕ್ಷೇಪ

Mainashree
Updated On : 18 Apr 2013, 1:13 am

ಚನ್ನಪಟ್ಟಣ ಕ್ಷೇತ್ರದ ವೀಕ್ಷಕ ಬದಲು
ರಾಮನಗರ: ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣಾ ವೀಕ್ಷಕರನ್ನು ಬದಲಿಸಿ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಕ್ಷೇತ್ರದ ವೀಕ್ಷಕರಾಗಿ ಐಎಎಸ್ ಅಧಿಕಾರಿ ರಾಜೀವ್ ಕುಮಾರ್ ಮಿಟ್ಟಲ್ ನೇಮಕಗೊಂಡಿದ್ದಾರೆ. ಮೊ.9449640185 ಮೂಲಕ ಸಂಪರ್ಕಿಸಬಹುದು.
ದೇವನಹಳ್ಳಿ: 18 ನಾಮಪತ್ರ ಸಲ್ಲಿಕೆ
ದೇವನಹಳ್ಳಿ: ದೇವನಹಳ್ಳಿ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಎಲ್ಲ ರಾಜಕೀಯ ಪಕ್ಷಗಳು ಮತ್ತು ಪಕ್ಷೇತರರಾಗಿ ಒಟ್ಟು 18 ಮಂದಿ ತಮ್ಮ ನಾಮಪತ್ರಸಲ್ಲಿಸಿದ್ದಾರೆ. ಶಾಸಕ ವೆಂಕಟಸ್ವಾಮಿ ಭಾರತ ರಾಷ್ಟ್ರೀಯ ಕಾಂಗ್ರೆಸ್, ಮಾಜಿ ಶಾಸಕ ಜಿ.ಚಂದ್ರಣ್ಣ ಭಾರತೀಯ ಜನತಾ ಪಕ್ಷ, ಪಿಳ್ಳಮುನಿಶಾಮಪ್ಪ -ಜೆಡಿಎಸ್, ಡಿ.ಆರ್.ನಾರಾಯಣಸ್ವಾಮಿ -ಬಿಎಸ್‌ಆರ್ ಕಾಂಗ್ರೆಸ್, ಎ.ಹನುಮಂತಪ್ಪ - ಕೆಜೆಪಿ, ಪಿ.ವೆಂಕಟೇಶ್ ಬಿಎಸ್ಪಿ, ಡಿ.ಎಂ.ಕುಮಾರ್ ಜೆಡಿಯು ಹಾಗೂ ಪಕ್ಷೇತರರಾಗಿ ಮಾಜಿ ಶಾಸಕ ಮುನಿನರಸಿಂಹಯ್ಯ, ಬಿ.ಕೆ.ಶಿವಪ್ಪ, ಅಕ್ಕಯ್ಯಮ್ಮ, ಎಸ್.ಜಿ. ನಾರಾಯಣಸ್ವಾಮಿ, ಕೆ.ಎನ್.ಸ್ವಾಮಿ, ವೆಂಕಟೇಶ್, ಕುರುಬರಹಳ್ಳಿ ನಾಗರಾಜು, ಎಂ.ಶಿವಪ್ಪ, ಹಾಗೂ ಸಿ.ಮುನಿಯಪ್ಪ ನಾಮಪತ್ರ ಸಲ್ಲಿಸಿದ್ದಾರೆ.
ಜನಪರ ಕಾಳಜಿಬೇಕು: ಬಚ್ಚೇಗೌಡ
ಸೂಲಿಬೆಲೆ: ಚುನಾವಣಿ ಎನ್ನುವುದು ರಿಯಲ್ ಎಸ್ಟೇಟ್ ದಂಧೆಯಲ್ಲ. ಇಲ್ಲಿ ಜನಪರ ಕಾಳಿಜಿ ಬೇಕು ಎಂದು ಹೊಸಕೋಟೆ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ಬಿ.ಎನ್. ಬಚ್ಚೇಗೌಡರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ನಂದಗುಡಿ ಹೋಬಳಿ ತಾವರೆಕೆರೆ ಗ್ರಾ.ಪಂ ವ್ಯಾಪ್ತಿಯ ಯಳಚಹಳ್ಳಿ, ಮಂಚಪ್ಪನಹಳ್ಳಿ, ಕಾಳಪ್ಪನಹಳ್ಳಿ,ಬೀರಹಳ್ಳಿ, ಬಂಡಹಳ್ಳಿ, ಗಂಗಾಪುರ ಬಾಣಾಮಾಕನಹಳ್ಳಿ, ಲಿಂಗಪುರ, ಬೀರಾಹಳ್ಳಿ,ಗೇರ ಹಳ್ಳಿ ಗ್ರಾಮಗಳಲ್ಲಿ ಬುಧವಾರ ಬಿರುಸಿನ ಮತ ಯಾಚಿಸಿದ ಸಚಿವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಇದೇ ವೇಳೆ ಕಾಂಗ್ರೆಸ್ ತೊರೆದ ಮುಖಂಡ ರಮೇಶ್ ಸೇರಿದಂತೆ ಹಲವಾರು ಮಂದಿ ಬಿಜೆಪಿಗೆ ಸೇರ್ಪಡೆಯಾದರು. ಪೋಟಾಷಿಯಂ ಇಂಡಿಯಾ ಲಿ.ನಿರ್ದೇಶಕ ಬಿ.ಎನ್. ಗೋಪಾಲಗೌಡ, ಜಿಲ್ಲಾಧ್ಯಕ್ಷ ಬಿ.ಎಂ ನಾರಾಯಣಸ್ವಾಮಿ, ಜಿಪಂ ಸದಸ್ಯೆ ಸವಿತಾ ಗೋಪಾಲ್,ತಾಪಂ ಮಾಜಿ ಅಧ್ಯಕ್ಷ ರಾಜಶೇಖರ್ ಗೌಡ, ಟಿ.ಎಸ್. ರಾಜಶೇಖರ್‌ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement