4.10 ಲಕ್ಷ ನಗದು ವಶ, ಪ್ರಕರಣ ದಾಖಲು
ಕ.ಪ್ರ.ವಾರ್ತೆ ರಾಮನಗರ ಏ. 18
ತಾಲೂಕಿನ ಹೆಜ್ಜಾಲ ಚೆಕ್ ಪೋಸ್ಟ್ ಬಳಿ ಕಾರಿನಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ರು. 4.10 ಲಕ್ಷ ನಗದು ಗುರುವಾರ ಪತ್ತೆಯಾಗಿದ್ದು, ಬಿಡದಿ ಪೊಲೀಸರು ಹಣ ಮತ್ತು ಕಾರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಿರಣಕುಮಾರ್ ಎಂಬುವರು ಕಾರಿನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದಾಗ ಪೊಲೀಸರು ಚೆಕ್ ಪೋಸ್ಟ್ನಲ್ಲಿ ಕಾರು ತಡೆದು ತಪಾಸಣೆ ನಡೆಸಿದರು. ಆ ವೇಳೆ ದೊರೆತ ಹಣಕ್ಕೆ ಯಾವುದೇ ದಾಖಲೆಗಳಿಲ್ಲದ ಕಾರಣ ವಶಪಡಿಸಿಕೊಳ್ಳಲಾಗಿದೆ.