ಅಭಿವೃದ್ಧಿ ಕೆಲಸ ಗಮನಿಸಿ ಉತ್ತಮ ಅಭ್ಯರ್ಥಿ ಆಯ್ಕೆ: ಸಿಂಧ್ಯಾ ವಿಶ್ವಾಸ
ಕನಕಪುರ: ಮತದಾನದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿದೆ, ಹಣ, ಹೆಂಡ, ಪ್ರಭಾವಗಳಿಗೆ ತುತ್ತಾಗಿ ತಮ್ಮ ಮತಗಳನು ್ಚ ಮಾರಿ ಕೊಳ್ಳುವುದಿಲ್ಲವೆಂಬ ಭರವಸೆಯಿದೆ, ಜನಪರ ಕಾರ್ಯಗಳು, ಅಭಿವೃದ್ಧಿ ಕೆಲಸಗಳನ್ನು ಗಮನಿಸಿ ಉತ್ತಮ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಕನಕಪುರದ ಮತದಾರರು ಆರಿಸುತ್ತಾರೆ ಎಂದು ಮಾಜಿ ಸಚಿವ ಪಿಜಿಆರ್‌ಸಿಂಧ್ಯಾ ಹೇಳಿದ್ದಾರೆ.
ಅವರು ಕನಕಪುರ ತಾಲೂಕು ಕೂತಗಾನಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಪ್ರಚಾರದಲ್ಲಿ ಜೆಡಿಎಸ್ ಮುಖಂಡರುಗಳಾದ ಡಿ.ಎಂ.ವಿಶ್ವನಾಥ್, ನಾರಾಯಣಗೌಡ,ಬಿ.ಎಸ್.ಗೌಡ, ಪುಟ್ಟರಾಜು, ಬಿ. ನಾಗ ರಾಜು, ಚಂದ್ರು ಪಾಲ್ಗೊಂಡಿದ್ದರು.
ಶಾಸಕ ಡಿ.ಕೆ.ಶಿವಕುಮಾರ್ ಕನಕಪುರ ಕ್ಷೇತ್ರದ ಅಭಿವೃದ್ಧಿ ಐದು ವರ್ಷಗಳಿಂದೀಚೆಗೆ ಮಾತ್ರ ಆಗಿದೆ. ಹಿಂದೆ ಏನೂ ಕೆಲಸಗಳೇ ನಡೆದಿಲ್ಲ ಎಂದು ಅಬ್ಬರದ ಪ್ರಚಾರ ನಡೆಸಿದ್ದಾರೆ.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ರ್ಯದರ್ಶಿ ಡಿ.ಎಂ.ವಿಶ್ವನಾಥ್ ಮಾತನಾಡಿ, ಶಾಸಕ ಶಿವಕುಮಾರ್ ಅಭಿವೃದ್ಧಿ ಮರೆತು ಜನರಿಗೆ ಆಮಿಷ ಒಡ್ಡುವ ಮೂಲಕ ಗೆಲ್ಲುವ ಯತ್ನ ನಡೆಸಿದ್ದಾರೆ. ಪ್ರಜ್ಞಾವಂತ ಮತದಾರರು ಈ ಚುನಾವಣೆಯಲ್ಲಿ ಅವರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.