ಎಂ.ಗೋವಿಂದರಾಜು ನಾಮಪತ್ರ ಸಲ್ಲಿಕೆ
ಕ.ಪ್ರ.ವಾರ್ತೆ ಕನಕಪುರ ಏ. 18
ಕನಕಪುರ ವಿಧಾನಸಭಾ ಕ್ಷೇತ್ರದ ಬಿಎಸ್ಆರ್ ಪಕ್ಷದ ಅಭ್ಯರ್ಥಿಯಾಗಿ ಬೆಂಗಳೂರಿನ ಎಂ.ಗೋವಿಂದರಾಜು ನಾಮಪತ್ರ ಸಲ್ಲಿಸಿದ್ದಾರೆ. ಉಮೇದುವಾರ ಗೋವಿಂದರಾಜು ಮಾತನಾಡುತ್ತಾ, ಕನಕಪುರ ತಾಲೂಕು ಇಂದಿಗೂ ಅಭಿವೃದ್ಧಿ ಕಾಣದೆ ತೀರಾ ಹಿಂದುಳಿದಿದೆ. ಗುಡಿಸಲು ವಾಸಿಗಳು ಹಾಗೂ ಹಸಿವಿನಿಂದ ಬಳಲುವವರು ಹೆಚ್ಚಾಗಿದ್ದಾರೆ. ಅಪಾರವಾದ ಪ್ರಾಕೃತಿಕ ಸಂಪನ್ಮೂಲ ಗಳನ್ನು ಹೊಂದಿರುವ ಕನಕಪುರ ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ, ಅರಣ್ಯ ಸಂಪತ್ತಿನ ನಾಶ ಹೆಚ್ಚಾಗಿದೆ ಎಂದರು. ಬಿಎಸ್ಆರ್ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಕ್ರಮ ಗಣಿಗಾರಿಕೆ, ಅರಣ್ಯ ಸಂಪತ್ತಿನ ಲೂಟಿಯ ವಿರುದ್ಧ ಕ್ರಮ ಕೈಗೊಂಡು ಕಡಿವಾಣ ಹೇರಲಾಗುವುದು. ಗ್ರಾಮೀಣ ಜನರಿಗೆ ಸರ್ಕಾರದ ಸಕಲ ಸವಲತ್ತುಗಳನ್ನು ಮನೆಬಾಗಿಲಿಗೆ ತಲುಪಿಸಲಾಗುವುದು. ಯುವ ಪೀಳಿಗೆಯ ಆಶಾಕಿರಣ ಶ್ರೀರಾಮುಲು ನೇತೃತ್ವದಲ್ಲಿ ರಾಜ್ಯ ಉತ್ತಮ ಅಭಿವೃದ್ಧಿ ಕಾಣುವ ನಿರೀಕ್ಷೆಯಿದೆ ಎಂದು ಗೋವಿಂದರಾಜು ನುಡಿದರು. ಬಿಎಸ್ಆರ್ ಕಾಂಗ್ರೆಸ್ಮುಖಂಡರಾದ ಸಿ.ಜಿ.ಸಿದ್ದಪ್ಪ, ಲಕ್ಷ್ಮಣ್, ಮಹಾಲಿಂಗು, ಶಿವಮಾದು, ಮುನಿರಾಜು, ನಾರಾಯಣಗೌಡ ಪಾಲ್ಗೊಂಡಿದ್ದರು.