ದೊಡ್ಡಬಳ್ಳಾಪುರದಲ್ಲೂ ಪ್ರಚಾರ
ದೊಡ್ಡಬಳ್ಳಾಪುರ: ಜೆಡಿಎಸ್ ಅಭ್ಯರ್ಥಿ ಸಿ.ಚೆನ್ನಿಗಪ್ಪ ಪರ ಚುನಾವಣಾ ಪ್ರಚಾರಕ್ಕಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಏ.19ರ ಸಂಜೆ 6 ಗಂಟೆಗೆ ದೊಡ್ಡಬಳ್ಳಾಪುರಕ್ಕೆ ಆಗಮಿಸಲಿದ್ದಾರೆ. ರೋಜಿಪುರದ ವೆಂಕಟೇಶ್ವರಪ್ರಸಾದ ಕಲ್ಯಾಣ ಮಂದಿರ ಬಳಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪಕ್ಷದ ಅಭ್ಯರ್ಥಿ ಸಿ.ಚನ್ನಿಗಪ್ಪ, ಮುಖಂಡರಾದ ಸಿ.ನಾರಾಯಣಸ್ವಾಮಿ, ಜ್ಯೋತಿರೆಡ್ಡಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಲಿದ್ದಾರೆ.