ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರಾಮನಗರ 7 ಅಭ್ಯರ್ಥಿಗಳ ಉಮೇದುವಾರಿಕೆ ತಿರಸ್ಕೃತ

Vishwanath S
Updated On : 19 Apr 2013, 1:15 am

ಕ.ಪ್ರ.ವಾರ್ತೆ , ರಾಮನಗರ , ಏ.18
ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ 4 ಕ್ಷೇತ್ರಗಳಲ್ಲಿ 7 ಅಭ್ಯರ್ಥಿಗಳ ಉಮೇದುವಾರಿಕೆ ಅರ್ಜಿಗಳು ತಿರಸ್ಕೃತಗೊಂಡಿದ್ದು, 69 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿಗಳು ಘೋಷಿಸಿದ್ದಾರೆ.
ರಾಮನಗರದಲ್ಲಿ ಪಕ್ಷೇತರರಾದ ಉಮೇಶ್, ಕುಮಾರಸ್ವಾಮಿ, ಮಾಗಡಿಯಲ್ಲಿ ಅಂಬೇಡ್ಕರ್ ಭಾರತೀಯ ಜನತಾಪಾರ್ಟಿಯ ಸುಬ್ರಹ್ಮಣಿ, ಬಿಎಸ್‌ಆರ್ ಪಕ್ಷದ ಕೆ.ಬಿ.ರಜಿತ್ ಕುಮಾರ್, ಪಕ್ಷೇತರ ಡಾ.ರಾಜಶೇಖರ್, ಮಹಮದ್ ಮನೀರ್ ಅಹಮದ್, ಕನಕಪುರದಲ್ಲಿ ಪಕ್ಷೇತರ ಶಿವಕುಮಾರ್ ಅವರ ನಾಮಪತ್ರಗಳು ತಿರಸ್ಕೃತಗೊಂಡಿವೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರು ಸಲ್ಲಿಸಿದ್ದ 3 ನಾಮಪತ್ರಗಳ ಪೈಕಿ 1 ತಿರಸ್ಕೃತಗೊಂಡಿದ್ದು, ಉಳಿದೆರಡು ಕ್ರಮಬದ್ಧವಾಗಿರುವ ಹಿನ್ನೆಲೆಯಲ್ಲಿ ಸ್ಪರ್ಧೆಗೆ
ತೊಡಕು ಇಲ್ಲ. ಚನ್ನಪಟ್ಟಣದಲ್ಲಿ 21, ರಾಮನಗರ 17, ಮಾಗಡಿ 17 ಮತ್ತು ಕನಕಪುರದಲ್ಲಿ 14 ಅಭ್ಯರ್ಥಿಗಳ ನಾಮಪತ್ರ ಅಂಗೀಕೃತವಾಗಿವೆ.
ಕಣದಲ್ಲಿರುವ ಅಭ್ಯರ್ಥಿಗಳು: ರಾಮನಗರ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ-ಜೆಡಿಎಸ್, ಮರಿದೇವರು-ಕಾಂಗ್ರೆಸ್, ಶಿವಮಾದು-ಬಿಜೆಪಿ, ಜಿ.ಗೋವಿಂದಯ್ಯ-ಆರ್‌ಪಿಐ, ಎಸ್.ಜಯರಾಮ್ ಭಾರತೀಯ ಡಾ.ಬಿ.ಆರ್.ಅಂಬೇಡ್ಕರ್ ಜನತಾ ಪಾರ್ಟಿ, ಎಚ್.ಎಸ್.ತೀರ್ಥಪ್ರಸಾದ್ ಬಿಎಸ್‌ಆರ್, ಎಸ್.ಆರ್.ನಾಗರಾಜು -ಕೆಜೆಪಿ, ಫೈರೋಜ್ ಅಲಿ ಖಾನ್-ಎಸ್‌ಡಿಪಿಐ ಹಾಗೂ ಪಕ್ಷೇತರರಾದ ಅಜೀಜ್ ಉಲ್ಲಾ ಷರೀಫ್, ಕಾಂತರಾಜು, ಚಲುವರಾಜು, ಪುಟ್ಟಸ್ವಾಮಾಚಾರಿ, ಮರಿದೇವರು, ಎಂ.ಪಿ.ಮುನಾವರ್ ಷರೀಫ್, ರವಿಕುಮಾರ್, ಜಿ.ಪಿ.ಶಂಕರೇಗೌಡ, ಶಿವಲಿಂಗಯ್ಯ ಕಣದಲ್ಲಿದ್ದಾರೆ.
ಮಾಗಡಿ ಕ್ಷೇತ್ರ ವಿವರ: ಸಿ.ಕೆ.ಜಗದಿಶ್ ಪ್ರಸಾದ್ - ಬಿಜೆಪಿ, ಜಾಫರ್ ಪಾಷಾ- ಬಿಎಸ್‌ಪಿ, ಎಚ್.ಸಿ. ಬಾಲಕೃಷ್ಣ- ಜೆಡಿಎಸ್, ಎ. ಮಂಜುನಾಥ್ ಕಾಂಗ್ರೆಸ್, ಎ.ಜಿ. ಕೃಷ್ಣಮೂರ್ತಿ-ಭಾರತೀಯ ಡಾ.ಬಿ.ಆರ್. ಅಂಬೇಡ್ಕರ್ ಜನತಾ ಪಾರ್ಟಿ, ಎಚ್.ಎಂ. ಕೃಷ್ಣಮೂರ್ತಿ-ಕೆಜೆಪಿ, ಕೆ.ರಮೇಶ-ಜೆಡಿಯು ಹಾಗೂ ಪಕ್ಷೇತರರಾದ ಆರ್.ಎನ್.ಗುರುಪ್ರಸಾದ್, ಟಿ.ಎಂ.ಗಂಗಯ್ಯ, ಬಾಲಕೃಷ್ಣ, ಎಚ್.ಎಲ್.ಬಾಲಕೃಷ್ಣ, ಮಹಮದ್ ಅಪ್ಸರ್ ಪಾಷಾ, ಎನ್.ಮಂಜುನಾಥ್, ಎಂ.ಟಿ.ರವಿಕುಮಾರ್, ವಿ.ರಾಜಶೇಖರ್, ಆರ್.ರಂಗಸ್ವಾಮಿ, ಟಿ.ಹೊಂಬೇಗೌಡ ಅಭ್ಯರ್ಥಿಗಳಾಗಿದ್ದಾರೆ.
ಕನಕಪುರ ಕಲಿಗಳು: ಬಿ.ನಾಗರಾಜು-ಬಿಜೆಪಿ, ಮಲ್ಲಿಕಾರ್ಜುನಯ್ಯ-ಬಿಎಸ್‌ಪಿ, ಡಿ.ಕೆ. ಶಿವಕುಮಾರ್ ಕಾಂಗ್ರೆಸ್, ಪಿ.ಜಿ.ಆರ್. ಸಿಂಧ್ಯಾ-ಜೆಡಿಎಸ್, ಎಂ. ಗೋವಿಂದರಾಜು-ಬಿಎಸ್‌ಆರ್ ಕಾಂಗ್ರೆಸ್, ಎಂ.ಮಧು- ಕೆಜೆಪಿ, ಕಾಳಯ್ಯ- ಭಾರತೀಯ ಡಾ.ಬಿ.ಆರ್. ಅಂಬೇಡ್ಕರ್ ಜನತಾ ಪಾರ್ಟಿ ಮತ್ತು ಪಕ್ಷೇತರರಾದ  ಜೆ.ನಟರಾಜು, ಕೆ. ಮುಟ್ಟಮಾದೇಗೌಡ, ರಮೇಶ್, ಡಿ.ಸಿ. ರಮೇಶ್, ಕೆ.ವಿ. ವಿಶ್ವನಾಥ್, ಶಿವರೇಣುಕ, ಡಿ.ಕೆ.ಸುರೇಶ್ ಅಖಾಡಕ್ಕೆ ಇಳಿದವರು.
ಚನ್ನಪಟ್ಟಣದಲ್ಲಿ ಸೆಣೆಸು: ಅನಿತಾಕುಮಾರಸ್ವಾಮಿ-ಜೆಡಿಎಸ್, ರವಿಕುಮಾರ್ ಬಿಜೆಪಿ, ಸಾದತ್ ಆಲಿ ಖಾನ್ ಕಾಂಗ್ರೆಸ್, ವಿ.ಎಸ್. ಸುಜೀವನ್ ಕುಮಾರ್ ಬಿಎಸ್‌ಪಿ, ಅಶ್ರಫ್ ಹಿಂದೂಸ್ಥಾನ್ ಜನತಾ ಪಕ್ಷ, ಕೆ.ಎಚ್.ಕುಮಾರ್- ಲೋಕ ಜನಶಕ್ತಿ, ಬಿ.ನಾಗರಾಜು-ಕೆಜೆಪಿ, ಮುಜಮಿಲ್ ಪಾಷಾ-ಅಂಬೇಡ್ಕರ್ ನ್ಯಾಷನಲ್ ಕಾಂಗ್ರೆಸ್, ಎಂ.ಸಿ.ವಿ.ಮೂರ್ತಿ-ಜೆಡಿಯು, ಸಿ.ಪಿ.ಯೋಗೇಶ್ವರ್ ಸಮಾಜವಾದಿ ಪಕ್ಷ, ಶಿವರುದ್ರಯ್ಯ-ಭಾರತೀಯ ಡಾ.ಬಿ.ಆರ್.ಅಂಬೇಡ್ಕರ್ ಜನತಾ ಪಾರ್ಟಿ ಹಾಗೂ ಪಕ್ಷೇತರರಾದ ಎಚ್.ಆರ್.ಅಪ್ಪಾಜಿಗೌಡ, ಜುಲ್ಫೀಕರ್ ಆಲಿಖಾನ್, ಜೈ ಕಿಸಾನ್, ಜೆ.ಟಿ.ಪ್ರಕಾಶ್, ಬೀಬಿ ಜಾನ್, ಟಿ.ಎಂ. ಮಂಚೇಗೌಡ, ಎಂ.ಯೋಗೇಶ್, ಸಿ.ಪಿ. ಯೋಗೇಶ್ವರ್, ರತ್ನಮ್ಮ, ಸುವರ್ಣ, ಸೈಯದ್ ಜುಲ್ಫಿಕರ್ ಮೆಹದಿ ನಾಮಪತ್ರ ಕ್ರಮಬದ್ಧವಾಗಿವೆ.

ಚುನಾವಣೆಗೆ ತರಬೇತಿ
ರಾಮನಗರ: ಜಿಲ್ಲಾ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಕಾರ್ಯಕ್ಕೆ ನಿಯೋಜಿತರಾಗಿರುವ ಪಿಆರ್‌ಓ ಮತ್ತು ಎಪಿಆರ್‌ಓಗಳಿಗೆ ಜಿಲ್ಲಾಡಳಿತವು ತರಬೇತಿಯನ್ನು ಆಯೋಜಿಸಿದೆ. ಮಾಗಡಿ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಸಿಬ್ಬಂದಿಗೆ ಏ.22ರಂದು, ಕನಕಪುರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಸಿಬ್ಬಂದಿಗೆ ಏ.23ರಂದು ಮೊದಲ ಹಂತದ ತರಬೇತಿ ನಡೆಯಲಿದೆ. ಏ.29ರಂದು ಎರಡನೇ ಹಂತದ ತರಬೇತಿ ನಡೆಯಲಿದೆ.

ಮತದಾನದ ಬಗ್ಗೆ ಅರಿವು
ರಾಮನಗರ: ಬೆಂಗಳೂರಿನ ಕ್ಷೇತ್ರ ಪ್ರಚಾರ ನಿರ್ದೇಶನಾಲಯವು ವಾರ್ತಾ ಇಲಾಖೆಯ ಸಹಯೋಗದೊಂದಿಗೆ ಮತದಾರರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲು ಏ.20 ರಿಂದ 22ರವರೆಗೆ ನಗರದ ಅಂಬೇಡ್ಕರ್ ಭವನದಲ್ಲಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದೆ. ಈ ಸಂದರ್ಭದಲ್ಲಿ ಪ್ರಚಾರ ಗೀತೆ, ಕರಪತ್ರ ವಿತರಣೆ, ಸಾಕ್ಷ್ಯಚಿತ್ರ ಪ್ರದರ್ಶನದ ಮೂಲಕ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement