ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸುದ್ದಿ ಸಂಕ್ಷೇಪ

Mainashree
Updated On : 19 Apr 2013, 12:59 pm

ವೀಕ್ಷಕರ ಮೊಬೈಲ್ ಸಂಖ್ಯೆ ನೀಡಿಕೆ
ರಾಮನಗರ:
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರವಾರು ನೇಮಕಗೊಂಡಿರುವ ಸಾಮಾನ್ಯ ವೀಕ್ಷಕರು, ವೆಚ್ಚ ವೀಕ್ಷಕರ ಹೆಸರು, ಮೊಬೈಲ್ ಸಂಖ್ಯೆಯನ್ನು ನೀಡಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ, ಚುನಾವಣಾ ಅಕ್ರಮಗಳ ಬಗ್ಗೆ ನಾಗರಿಕರು ದೂರು ನೀಡಬಹುದಾಗಿದೆ.
ಸಾಮಾನ್ಯ ವೀಕ್ಷಕರು: ಮಾಗಡಿ ಕ್ಷೇತ್ರ - ಎಸ್.ಬಿ.ರಾವಲ್, ಮೊ. 9449643182,  ರಾಮನಗರ ಕ್ಷೇತ್ರ-ಡಾ. ಆರ್.ವಿ.ಚಂದ್ರವದನ್, ಮೊ.9449650183, ಕನಕಪುರ ಕ್ಷೇತ್ರ-ಕಮಲ ಚಕ್ರವರ್ತಿ, ಮೊ.9449612184, ಚನ್ನಪಟ್ಟಣ ಕ್ಷೇತ್ರ- ರಾಜೀವ್ಕುಮಾರ್ ಮಿಟ್ಟಲ್, ಮೊ.9449640185.
ವೆಚ್ಚ ವೀಕ್ಷಕರು: ಮಾಗಡಿ ಕ್ಷೇತ್ರ - ಶಾಂತನ್ಬೋಸ್, ಮೊ.9619480103, ರಾಮನಗರ ಕ್ಷೇತ್ರ-ಅಂಬೂಸೆಲ್ವಂ, ಮೊ.9840533189, ಕನಕಪುರ ಕ್ಷೇತ್ರ-ಆರ್.ವಿ.ಅರುಣ್ ಪ್ರಸಾದ್, ಮೊ.9444194442, ಚನ್ನಪಟ್ಟಣ ಕ್ಷೇತ್ರ- ಬಿ.ಕೆ.ಮೊಹಂತಿ, ಮೊ.8455885150.
ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ
ಕೃಷ್ಣರಾಜಪುರ:
ಜಿಪಂ ಮಾಜಿ ಸದಸ್ಯ ಕೆ.ಎಂ.ಸೋಮಶೇಖರ್ ಕಾಂಗ್ರೆಸ್ ತೊರೆದು ತಮ್ಮ ಬೆಂಬಲಿಗರೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅರವಿಂದ ಲಿಂಬಾವಳಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಮಹದೇವಪುರ ಕ್ಷೇತ್ರದ ಮಾರತ್ತಹಳ್ಳಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡು ಮಾತನಾಡಿದ ಕೆ.ಎಂ.ಸೋಮಶೇಖರ್, ಕಾಂಗ್ರೆಸ್ ರಾಜ್ಯ ಮುಖಂಡರು ಹಣದ ಅಮಿಷಕ್ಕೆ ಒಳಾಗಾಗಿ ಸ್ಥಳೀಯರನ್ನು ಕಡೆಗಣಿಸಿ ಬೇರೆಯವರಿಗೆ ಟಿಕೆಟ್ ನೀಡಿರುವುದರಿಂದ ಪಕ್ಷ ತ್ಯಜಿಸಿರುವುದಾಗಿ ತಿಳಿಸಿದರು. ಕೃಷ್ಣಾರೆಡ್ಡಿ, ಶಿವಶಂಕರ್, ಸುರೇಶ್ರೆಡ್ಡಿ ಬೆಂಬಲಿಗರು   ಮತ್ತಿತರರು ಬಿಜೆಪಿ ಸೇರ್ಪಡೆಗೊಂಡರು. ಕೆ.ಆರ್.ಪುರ ಬಿಜೆಪಿ ಘಟಕದ ಅಧ್ಯಕ್ಷ ಜಯಚಂದ್ರರೆಡ್ಡಿ, ಮುಖಂಡರಾದ ನಲ್ಲೂರ್ಹಳ್ಳಿ ಚಂದ್ರಶೇಖರ್ರೆಡ್ಡಿ, ರಾಜಾರೆಡ್ಡಿ,  ವೆಂಕಟಸ್ವಾಮಿರೆಡ್ಡಿ, ಮನೋಹರ್ರೆಡ್ಡಿ ಮತ್ತಿತರರು ಇದ್ದರು.
ದೊಡ್ಡಬಳ್ಳಾಪುರ: 2 ನಾಮಪತ್ರ ತಿರಸ್ಕೃತ
ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಲ್ಲಿಕೆಯಾಗಿದ್ದ 12 ನಾಮಪತ್ರಗಳ ಪೈಕಿ 2 ನಾಮಪತ್ರಗಳು ತಿರಸ್ಕೃತಗೊಂಡಿವೆ. ಕರ್ನಾಟಕ ಮಕ್ಕಳ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮಹೇಶ್ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಚೆನ್ನಕೃಷ್ಣ ಎಂಬುವವರ ನಾಮಪತ್ರಗಳು ಅಸಿಂಧುಗೊಂಡಿವೆ. ಒಟ್ಟು 10 ಅಭ್ಯರ್ಥಿಗಳ ನಾಮಪತ್ರಗಳು ಸ್ವೀಕೃತವಾಗಿವೆ. ನಾಮಪತ್ರ ಹಿಂದಕ್ಕೆ ಪಡೆಯಲು ಶನಿವಾರ ಕಡೆಯ ದಿನವಾಗಿದೆ.
ಕಣದಲ್ಲಿರುವ ಅಭ್ಯರ್ಥಿಗಳು: ಜೆ.ನರಸಿಂಹಸ್ವಾಮಿ (ಬಿಜೆಪಿ), ಟಿ.ವೆಂಕಟರಮಣಯ್ಯ (ಕಾಂಗ್ರೆಸ್), ಸಿ.ಚನ್ನಿಗಪ್ಪ(ಜೆಡಿಎಸ್), ವಿ.ನಾಗೇಂದ್ರಪ್ರಸಾದ್ (ಕೆಜೆಪಿ), ಬಿ.ಮುನೇಗೌಡ (ಪಕ್ಷೇತರ), ಆರ್.ಚಂದ್ರತೇಜಸ್ವಿ(ಸಿಪಿಐಎಂ), ಪುರುಷೋತ್ತಮ್ (ಬಿಎಸ್ಪಿ), ಕುಮಾರ್ (ಬಿಎಸ್ಆರ್ ಕಾಂಗ್ರೆಸ್), ಕೆ.ಆನಂದಕುಮಾರ್, ಮುನಿರಾಜು ಸೇರಿದಂತೆ 10 ಮಂದಿ ಕಣದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement