'ಜನಪರ ಆಡಳಿತಕ್ಕಾಗಿ ಕಾಂಗ್ರೆಸ್ ಬೆಂಬಲಿಸಿ'
ಕ.ಪ್ರ.ವಾರ್ತೆ , ರಾಮನಗರ , ಏ.19
ಸುಭದ್ರ ಸರ್ಕಾರ ಮತ್ತು ಜನಪರ ಆಡಳಿತಕ್ಕಾಗಿ ಕಾಂಗ್ರೆಸ್ಗೆ ಮತ ನೀಡುವಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ. ತಾಲೂಕಿನ ಕೈಲಾಂಚ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ರಾತ್ರಿವರೆಗೆ ಕಾಂಗ್ರೆಸ್ ಅಭ್ಯರ್ಥಿ ಮರಿದೇವರು ಪರ ಮತಯಾಚನೆ ನಡೆಸಿದ ಅವರು, ಈಗಾಗಲೇ ಜೆಡಿಎಸ್ ಮತ್ತು ಬಿಜೆಪಿ ಆಡಳಿತದಿಂದ ಜನತೆ ರೋಸಿ ಹೋಗಿದ್ದಾರೆ ಎಂದು ಟೀಕಿಸಿದರು.
ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಅವರು ರಾಮನಗರದಿಂದಲೇ ಗೆದ್ದು ಮುಖ್ಯಮಂತ್ರಿಯಾಗಿದ್ದಾರೆ. ಸಂಸದ ಅವಧಿ ಇನ್ನೂ ಇರುವಾಗಲೇ ಕುಮಾರಸ್ವಾಮಿ ವಿಧಾನಸಭೆಗೆ ಸ್ಪರ್ಧಿಸಿದ್ದಾರೆ. ಹೀಗಾಗಿ ಅವರು ಗೆದ್ದರೆ ಮತ್ತೊಂದು ಮರು ಚುನಾವಣೆ ಖಚಿತ ಎಂದರು.
ಕ್ಷೇತ್ರದಲ್ಲಿ ಮರಿದೇವರು ನೆಪಮಾತ್ರಕ್ಕೆ ಅಭ್ಯರ್ಥಿ, ಮತದಾರರು ನನ್ನನ್ನೇ ಅಭ್ಯರ್ಥಿ ಎಂದು ತಿಳಿದು ಚುನಾಯಿಸಬೇಕು ಎಂದು ಶಿವಕುಮಾರ್ ಮನವಿ ಮಾಡಿದರು.
ಅಭ್ಯರ್ಥಿ ಮರಿದೇವರು ಮಾತನಾಡಿ, ದಿನದ 24 ಗಂಟೆಗಳ ಕಾಲ ಜನರ ಸೇವೆ ಮಾಡಲು ಹಂಬಲಿಸುತ್ತಿರುವ ನನ್ನನ್ನು ಆಶೀರ್ವದಿಸಿ, ಚುನಾಯಿಸಬೇಕು ಎಂದರು. ಮಾಜಿ ಶಾಸಕ ಲಿಂಗಪ್ಪ, ಕೆ.ರಮೇಶ್, ಜಯರಾಮಯ್ಯ, ವೆಂಕಟೇಶ್,ರಾಜು, ರವಿ ಭಾಗವಹಿಸಿದ್ದರು.