ಬಸ್-ಬೈಕ್ ಡಿಕ್ಕಿ: ಇಬ್ಬರ ಸಾವು
ಮದ್ದೂರು: ಸಾರಿಗೆ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ಕೊಪ್ಪ - ಮದ್ದೂರು ರಸ್ತೆಯ ಕೋಡಿಹಳ್ಳಿ ಗೇಟ್ ಬಳಿ ನಡೆದಿದೆ.ತಾಲೂಕಿನ ಕುಂಟನಹಳ್ಳಿ ಗ್ರಾಮದ ಕರಿಪುಟ್ಟೇಗೌಡರ ಪುತ್ರ ಶಿವ (45), ಆತನ ತಂಗಿ ಸರೋಜಮ್ಮನ ಪುತ್ರ ಮಲ್ಲೇಶ (25) ಮೃತಪಟ್ಟರು. ಶಿವ ಮತ್ತು ಮಲ್ಲೇಶ್ ಇಬ್ಬರು ಬೈಕ್ನಲ್ಲಿ ಆನೆದೊಡ್ಡಿಯಲ್ಲಿ ದೇವರ ಉತ್ಸವ ಸಂಬಂಧ ಏರ್ಪಡಿಸಿದ್ದ ಪರ ಅನ್ನಸಂತರ್ಪಣೆ ಮುಗಿಸಿಕೊಂಡು ಗ್ರಾಮಕ್ಕೆ ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.ಬೆಸಗರಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.