ರಾಮನ ಆದರ್ಶ ಪಾಲಿಸಿ: ಕೃಷ್ಣಮೂರ್ತಿ
ಕ.ಪ್ರ. ವಾರ್ತೆ ನೆಲಮಂಗಲ ಏ.19
ಮಹಾನ್ ಚೇತನವಾಗಿರುವ ಶ್ರೀರಾಮನ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದ ಪ್ರತಿಯೊಬ್ಬರು ಪುರುಷೋತ್ತಮರಾಗಿ ಉತ್ತಮ ಸಮಾಜ ನಿರ್ಮಿಸಬೇಕು ಎಂದು ಪುರಸಭಾ ಮಾಜಿ ಸದಸ್ಯ ಎನ್.ಆರ್.ಕೃಷ್ಣಮೂರ್ತಿ ತಿಳಿಸಿದರು.
ಅವರು ಶುಕ್ರವಾರ ಪಟ್ಟಣದ ಚನ್ನಪ್ಪ ಬಡಾವಣೆಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಶ್ರೀರಾಮನವಮಿ ಕಾರ್ಯಕ್ರಮ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ಉತ್ಸವದ ಮೆರವಣಿಗೆ ನೇತೃತ್ವ ವಹಿಸಿ ಮಾತನಾಡಿದರು.
ಪಟ್ಟಣದ ಅಡೇಪೇಟೆಯ ಹಿಪ್ಪೆ ಆಂಜನೇಯ ಸ್ವಾಮಿ, ರಾಮಮಂದಿರ, ವಾಸವಿ ಕಲ್ಯಾಣ ಮಂಟಪ ರಸ್ತೆ, ಮಾರ್ಕೆಟ್ ಚೌಕದ ಬಳಿ ಪೇಟೆ ಆಂಜನೇಯ ಸ್ವಾಮಿ ದೇವಾಲಯ, ಬಸ್ ನಿಲ್ದಾಣ, ಕುಣಿಗಲ್ ಬೈಪಾಸ್, ತಿಮ್ಮಶಿಟ್ಟಪ್ಪ ಬಡಾವಣೆ ಆಂಜನೇಯ ದೇವಸ್ಥಾನ, ಸೊಂಡೆಕೊಪ್ಪ ಆಟೋ ನಿಲ್ದಾಣ ಹಾಗೂ ಪಟ್ಟಣದ ಅನೇಕ ಕಡೆ ರಾಮ ನವಮಿ ಆಚರಿಸಿ ಪಾನಕ, ಮಜ್ಜಿಗೆ, ಹೆಸರುಬೇಳೆ ವಿತರಿಸಿ ಸಂಭ್ರಮಿಸಿದರು.