ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಕೃಷ್ಣಮೂರ್ತಿ ಸ್ಪಷ್ಟನೆ
ಕ.ಪ್ರ.ವಾರ್ತೆ , ಮಾಗಡಿ , ಏ.19
ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಕೆಜೆಪಿ ಅಭ್ಯರ್ಥಿ ಎಚ್.ಎಂ. ಕೃಷ್ಣಮೂರ್ತಿ ಸ್ಪಷ್ಟಪಡಿಸಿದರು.
ಪಟ್ಟಣದ ಕೆಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದೆ. ಆದರೆ, ಕಾಂಗ್ರೆಸ್ನ ಕೆಲ ನಾಯಕರು ನನಗೆ ಟಿಕೆಟ್ ತಪ್ಪಿಸಿದರು. ಈ ನಿಟ್ಟಿನಲ್ಲಿ ಕೆಜೆಪಿ ನನಗೆ ಟಿಕೆಟ್ ನೀಡಿದೆ. ಕೆಜೆಪಿ ಅಭ್ಯರ್ಥಿಯಾಗಿ ಗೆಲವಿಗಾಗಿ ಅವಿರತ ಹೋರಾಟ ಮಾಡುತ್ತೇನೆಯೇ ಹೊರತು, ಯಾವುದೇ ಕಾರಣಕ್ಕೂ ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಅಪ್ರಚಾರಕ್ಕೆ ಯಾರು ಕಿವಿಗೊಡಬಾರದು. ತಾವು ಮಾಗಡಿಯಲ್ಲಿ ಜಯ ಗಳಿಸುವುದು ನಿಶ್ಚಿತ ಎಂದರು.
ಕಂಠೀರವ ಸ್ಟುಡಿಯೋ ಮಾಜಿ ಅಧ್ಯಕ್ಷ ಎಂ.ರುದ್ರೇಶ್, ಸೀನಪ್ಪ, ಪುಟ್ಟಸ್ವಾಮಿ, ರಾಜಣ್ಣ, ಸಿ.ಎನ್.ಹನುಮಂತೇಗೌಡ, ಬಿ.ಎಚ್.ಮಹೇಶಯ್ಯ ಇತರರು ಇದ್ದರು.