ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಎಚ್ಡಿಕೆ ಕರ್ಮಭೂಮಿ ರಾಮನಗರ

Vishwanath S
Updated On : 21 Apr 2013, 12:31 pm

ಕ.ಪ್ರ. ವಾರ್ತೆ , ಚನ್ನಪಟ್ಟಣ ,   ಏ. 20
ಹೆಚ್.ಡಿ.ಕುಮಾರಸ್ವಾಮಿ ನಮ್ಮ ಜನ್ಮಭೂಮಿ ಹಾಸನವಾದರೂ, ಅವರ ಕರ್ಮಭೂಮಿ ರಾಮನಗರ ಜಿಲ್ಲೆ, ಮಣ್ಣಾಗುವ ಸಂದರ್ಭ ಬಂದರೆ ನಾವು ಬಿಡದಿಯ ನಮ್ಮ ತೋಟದ ಮನೆಯಲ್ಲೇ ಮಣ್ಣಾಗುತ್ತೇವೆ ಎಂದು ಅನಿತಾಕುಮಾರಸ್ವಾಮಿ ತಿಳಿಸಿದರು.
ಸಮಾಜಸೇವಕ ಜಯಮುತ್ತು ಹಾಗೂ ಕೂಡ್ಲೂರು ಗ್ರಾಮದ ಅರಸು ಜನಾಂಗದ ವಿವಿಧ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿ, ಈ ಜಿಲ್ಲೆ ನಮ್ಮ ಕುಟುಂಬಕ್ಕೆ ರಾಜಕೀಯಾಗಿ ಮರುಜನ್ಮ ನೀಡಿದ ಪುಣ್ಯಭೂಮಿ. ನಮ್ಮ ಜಮೀನು  ಬಿಡದಿಯ ಕೇತಿಗಾನಹಳ್ಳಿಯಲ್ಲೇ ಇದೆ. ರಾಜಕೀಯವಾಗಿ ಅತ್ಯುನ್ನತವಾದ ಸ್ಥಾನವನ್ನ ಒದಗಿಸಿದ್ದು ಈ ನೆಲದ ಮಣ್ಣು.  ಆದ್ದರಿಂದ ನಾನಾಗಲೀ ನನ್ನ ಯಜಮಾನರಾಗಲೀ ಈ ಮಣ್ಣಿನ ಮಕ್ಕಳಿಂದ ದೂರಾಗುವುದಿಲ್ಲ ಎಂದರು.
ಮಾದರಿ ಕ್ಷೇತ್ರ: ರಾಮನಗರವನ್ನ ಜಿಲ್ಲೆಯನ್ನಾಗಿಸಿ ಸಾವಿರಾರು ಕೋಟಿ ಅನುದಾನವನ್ನ ಬಿಡುಗಡೆ ಮಾಡಿ ಸರ್ವಾಂಗೀಣ ಅಭಿವೃದ್ಧಿ ಮಾಡಿ ಮಾದರಿ ಕ್ಷೇತ್ರವನ್ನಾಗಿಸಿದ್ದಾರೆ. ಆದರೆ ರಾಜಕೀಯ ವಿರೋಧಿಗಳು ಅಸೂಯೆ ಮತ್ತು ದ್ವೇಷದಿಂದ ಅನಗತ್ಯವಾದ ಟೀಕೆ ಆರೋಪಗಳನ್ನ ಮಾಡುವುದರಲ್ಲಿ ಜಿಲ್ಲೆಯ ಕೆಲ ಶಾಸಕರು ಕಾಲಕಳೆಯುತ್ತಿದ್ದಾರೆ. ಕುಮಾರಸ್ವಾಮಿ ಈ ಜಿಲ್ಲೆಗೆ ಏನು ಮಾಡಿದ್ದಾರೆ ಎಂಬುದನ್ನು ಜನತೆ ಸಾರಿಹೇಳುತ್ತಿದ್ದಾರೆ, ಹೊಟ್ಟೆಕಿಚ್ಚಿಗೆ ಮಾತನಾಡುವ ಮಂದಿಯಿಂದ ನಮಗೆ ಸರ್ಟಿಪಿಕೇಟಟ್ಬೇಕಿಲ್ಲ ಎಂದರು.
ಕ್ಷೇತ್ರದಲ್ಲಿ ಜೆಡಿಎಸ್ ಅಲೆ ಇದೆ: ಈ ಕ್ಷೇತ್ರ ಮೊದಲಿನಿಂದಲೂ ಜೆಡಿಎಸ್‌ನ ಭದ್ರಕೋಟೆಯಾಗಿದೆ. ಆದ್ದರಿಂದ ಈಗಲೂ ಕೂಡ ಜೆಡಿಎಸ್ ಪರವಾದ ಅಲೆ  ಎದ್ದಿದೆ. ಅನ್ಯಪಕ್ಷಗಳ ಮುಖಂಡರುಗಳು ಮತ್ತು ಕಾರ್ಯಕರ್ತರುಗಳು ಜೆಡಿಎಸ್‌ಗೆ ಸೇರ್ಪಡೆಗೊಳ್ಳುವ ಮೂಲಕ  ಇಲ್ಲಿಯವರೆಗೂ ನಡೆಯುತ್ತಿದ್ದ ಪೊಳ್ಳುರಾಜಕಾರಣಕ್ಕೆ ಇತಿಶ್ರಿಹಾಡಲು ಪಕ್ಷಕ್ಕೆ ಬಲತುಂಬಿದ್ದಾರೆಂದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
 ಜಿಲ್ಲೆ ಮತ್ತು ರಾಜ್ಯದಲ್ಲೂ ಹೆಚ್.ಡಿ.ಕುಮಾರಸ್ವಾಮಿಯವರ ಜನಾನುರಾಗಿ ಆಡಳಿತವನ್ನ ಮೆಚ್ಚಿ ಅನ್ಯಪಕ್ಷದ ಮುಖಂಡರುಗಳು ಜೆಡಿಎಸ್‌ಗೆ ಸೇರ್ಪಡೆಗೊಂಡು ಬಲತುಂಬುತ್ತಿದ್ದಾರೆ. 1983ರಲ್ಲಿ ರಾಜ್ಯದಲ್ಲಿ ಜನತಾ ಪರಿವಾರದ ಗಾಳಿ ಹೇಗೆ ಬೀಸಿತ್ತೋ ಈಗ 2013ರಲ್ಲೂ ಕೂಡ ಜೆಡಿಎಸ್ ಪರವಾದ ಪರ್ವ ಆರಂಭವಾಗಿದೆ. ರಾಜ್ಯಾದ್ಯಾಂತ ಬದಲಾವಣೆ ಗಾಳಿ ಬೀಸುತ್ತಿದ್ದು, ಜೆಡಿಎಸ್ ಅಧಿಕಾರಕ್ಕೆ ಬರುವಲ್ಲಿ ರಾಜ್ಯದ ಜನತೆ ಆಶೀರ್ವಾದ ಮಾಡಲಿದ್ದಾರೆಂಬ ವಿಶ್ವಾಸವಿದೆ ಎಂದು ಶಾಸಕಿ ಅನಿತಾಕುಮಾರಸ್ವಾಮಿ ಹೇಳಿದರು.
ಈ ಸಂದರ್ಭದಲ್ಲಿ ಬಮೂಲ್ ನಿರ್ದೇಶಕ ಲಿಂಗೇಶ್‌ಕುಮಾರ್, ಸಿಂ.ಲಿಂ.ನಾಗರಾಜು, ನಗರಸಭಾ ಸದಸ್ಯ ರಮೇಶ್ ಬಾಬು, ಜಿ.ಪಂ.ಸದಸ್ಯರಾದ ನಾಗೇಶ್ವರಿ ರಾಮಚಂದ್ರು, ಮಲ್ಲಿಕಾರ್ಜುನೇಗೌಡ,  ಹಾಪ್ ಕಾಮ್ಸ್ ದೇವರಾಜ್, ರವಿ, ರಾಧಮ್ಮರಂಗಸ್ವಾಮಿ, ಕೂರಣಗೆರೆ ರವಿ, ಕೂರ್ಣಗೆರೆ ಪುಟ್ಟಸ್ವಾಮಿ, ನಿಜಲಿಂಗೇಗೌಡ, ಮಾಸ್ತಿಗೌಡ, ಸಂತೋಷ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಆಶಿಷ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement