ಎಡಗೈ ಉಂಗುರದ ಬೆರಳಿಗೆ ಶಾಯಿ
ರಾಮನಗರ: ಚುನಾವಣಾ ನಿಯಮಾನುಸಾರ ಇದುವರೆಗೆ ಮತದಾರರ ಎಡಗೈ ತೋರು ಬೆರಳಿಗೆ ಗುರುತಿನ ಶಾಯಿ ಹಾಕಲಾಗುತ್ತಿತ್ತು. ಆದರೆ, ಪ್ರಸಕ್ತ ಚುನಾವಣೆಯಲ್ಲಿ ಎಡಗೈ ಉಂಗುರದ ಬೆರಳಿಗೆ ಶಾಯಿಯನ್ನು ಹಚ್ಚಲಾಗುವುದು. 2013ರ ಮಾರ್ಚ್ ಮಾಹೆಯಲ್ಲಿ ನಡೆದ ಪೌರ ಸಂಸ್ಥೆಗಳ ಚುನಾವಣೆಯಲ್ಲಿ ಎಡಗೈ ತೋರು ಬೆರಳಿಗೆ ಹಾಕಿರುವ ಶಾಯಿಯು ಇನ್ನು ಅಳಿಸಿ ಹೋಗಿಲ್ಲ. ಆದ್ದರಿಂದ ಪ್ರಸ್ತುತ ಮೇ 5 ರಂದು ನಡೆಯವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡುವವರ ಎಡಗೈ ಉಂಗುರ ಬೆರಳಿಗೆ ಶಾಯಿ ಹಾಕಿ ಗುರುತು ಮಾಡುವಂತೆ ರಾಜ್ಯ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.
ನೆಲಮಂಗಲ: 16 ಮಂದಿ ಸ್ಪರ್ಧೆ
ನೆಲಮಂಗಲ: ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಮೇ 5ರಂದು ನಡೆಯಲಿರುವ ಚುನಾವಣೆಗೆ ಒಟ್ಟು 21 ಮಂದಿ ನಾಮಪತ್ರ ಸಲ್ಲಿಸಿದ್ದು ಇವರ ಪೈಕಿ 5 ಮಂದಿ ನಾಮಪತ್ರ ಹಿಂದಕ್ಕೆ ಪಡೆದಿದ್ದು ಉಳಿದ 16 ಜನ ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿದ್ದಾರೆ. ಕೆಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಎಂ.ಜಿ.ಗಂಗರಾಮಯ್ಯ, ಪಕ್ಷೇತರ ಅಭ್ಯರ್ಥಿಗಳಾಗಿ ಕೆ.ವೈ. ಪೆದ್ದಣ್ಣ, ರುದ್ರೇಶ್, ಶಿವಪ್ರಸಾದ್ ಸಲ್ಲಿಸಿದ್ದ ನಾಮಪತ್ರ ಹಿಂಪಡೆದವರು ಎಂದು ಚುನಾವಣಾಧಿಕಾರಿ ಅಮರೇಶ್ ತಿಳಿಸಿದ್ದಾರೆ.