ಎಡಗೈ ಉಂಗುರದ ಬೆರಳಿಗೆ ಶಾಯಿ
ರಾಮನಗರ: ಚುನಾವಣಾ ನಿಯಮಾನುಸಾರ ಇದುವರೆಗೆ ಮತದಾರರ ಎಡಗೈ ತೋರು ಬೆರಳಿಗೆ ಗುರುತಿನ ಶಾಯಿ ಹಾಕಲಾಗುತ್ತಿತ್ತು.
ಆದರೆ, ಪ್ರಸಕ್ತ ಚುನಾವಣೆಯಲ್ಲಿ ಎಡಗೈ ಉಂಗುರದ ಬೆರಳಿಗೆ ಶಾಯಿಯನ್ನು ಹಚ್ಚಲಾಗುವುದು. 2013ರ ಮಾರ್ಚ್ ಮಾಹೆಯಲ್ಲಿ ನಡೆದ ಪೌರ ಸಂಸ್ಥೆಗಳ ಚುನಾವಣೆಯಲ್ಲಿ ಎಡಗೈ ತೋರು ಬೆರಳಿಗೆ ಹಾಕಿರುವ ಶಾಯಿಯು ಇನ್ನು ಅಳಿಸಿ ಹೋಗಿಲ್ಲ. ಆದ್ದರಿಂದ ಪ್ರಸ್ತುತ ಮೇ 5 ರಂದು ನಡೆಯವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡುವವರ ಎಡಗೈ ಉಂಗುರ ಬೆರಳಿಗೆ ಶಾಯಿ ಹಾಕಿ ಗುರುತು ಮಾಡುವಂತೆ ರಾಜ್ಯ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.