ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಡಿಕೆಶಿ ಗೆಲ್ಲಲೇಬೇಕೆಂಬ ಹಠದಿಂದ ಪ್ರಚಾರಕ್ಕಿಳಿದಿದ್ದೇನೆ: ಪತ್ನಿ ಉಷಾ

Vishwanath S
Updated On : 21 Apr 2013, 1:41 am

ಕ.ಪ್ರ. ವಾರ್ತೆ ,ಕನಕಪುರ ,  ಏ. 20
ರಾಜಕೀಯದಿಂದ ದೂರವೇ ಉಳಿದಿದ್ದು ಗೃಹಿಣಿಯಾಗಿ ಕಾರ್ಯನಿರ್ವಹಿಸುತ್ತಿದ್ದ ತಾವು ಈ ಚುನಾವಣೆಯಲ್ಲಿ ತಮ್ಮ ಪತಿ ಶಾಸಕ ಡಿ.ಕೆ.ಶಿವಕುಮಾರ್ ಗೆಲ್ಲಲೇಬೇಕು ಎಂಬ ಹಠದಿಂದ ಬೀದಿಬೀದಿಗಳಲ್ಲಿ ತಿರುಗಿ ಪ್ರಚಾರ ನಡೆಸುತ್ತಿರುವುದಾಗಿ ಉಷಾ ಶಿವಕುಮಾರ್ ಹೇಳಿದ್ದಾರೆ.  ಅವರು ಕನಕಪುರದ ವಿವಿಧ ವಾರ್ಡ್‌ಗಳಲ್ಲಿ ಶಾಸಕ ಡಿ.ಕೆ.ಶಿವಕುಮಾರ್ ಪರವಾಗಿ ಚುನಾವಣಾ ಪ್ರಚಾರ ನಡೆಸುತ್ತಾ ಹೇಳಿದ್ದಾರೆ.
ಕಳೆದ ಐದುವರ್ಷಗಳಿಂದ ಕನಕಪುರ ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುವುದನ್ನು ಕಣ  ,ಾರೆ ಕಂಡಿದ್ದೇನೆ, ರಸ್ತೆ ಅಗಲೀ ಕರಣ, ಬರಡಾದ ಕೆರೆಗಳಿಗೆ ನೀರು ತುಂಬಿಸುವುದು, ಅಂತರ್ಜಲ ಅಭಿವೃದ್ಧಿ, ಸಾವಿರಾರು ಜನರಿಗೆ ಮನೆಗಳ ನೀಡಿಕೆ, ಹತ್ತಾರು ಸಾವಿರ ಜನರಿಗೆ ನಿವೇಶನ, ನೂರಾರು ಗ್ರಾಮಗಳಿಗೆ ಕಾವೇರಿ ನೀರು, ಕ್ಷೇತ್ರದ ಎಲ್ಲಾ ಕಡೆ ಕುಡಿಯಲು ಶುದ್ಧನೀರು ಸರಬರಾಜು ಯೋಜನೆ, ಮೊದಲಾದವುಗಳು ನಿಶ್ಚಯವಾಗಿ ಜನರನ್ನು ತಲುಪಿವೆ. ಆದ್ದರಿಂದ ಶಿವಕುಮಾರ್ ಗೆಲ್ಲುವುದರಲ್ಲಿ ಸಂಶಯವಿಲ್ಲ ಎಂದು ಉಷಾ ಶಿವಕುಮಾರ್ ನುಡಿದರು.
ಪಾದಯಾತ್ರೆ ಪ್ರಚಾರದಲ್ಲಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರಾದ ಪ್ರಭಾ ಅರಸ್, ರತ್ನಮರಸಪ್ಪ, ಶಾಸಕರ ಸಹೋದರಿ, ಪುರಪ್ರತಿನಿಧಿ ಎಂ.ವಿ.ನಾಗರಾಜು, ಕಾಂಗ್ರೆಸ್ ಜಿಲ್ಲಾಉಪಾಧ್ಯಕ್ಷ ವಿ.ಶ್ರೀನಿವಾಸ್, ಎಂ.ವೆಂಕಟೇಶ್, ಎಂ.ಎಸ್.ಮಹೇಶ್, ಅರುಣ್, ಅಮ್ಜದ್, ವರದರಾಜು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement