ಮೊಬೈಲ್ ಸಂದೇಶ: ಮಾಹಿತಿ ನೀಡಿ
ಕ.ಪ್ರ. ವಾರ್ತೆ , ರಾಮನಗರ , ಏ. 20
ಮೇ 5 ರಂದು ನಡೆಯುವ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ ಯಾಚಿಸಿ ಮತದಾರರಿಗೆ ಏಕಕಾಲದಲ್ಲಿ ಎಸ್ಎಂಎಸ್ ಕಳುಹಿಸುವುದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ.
ಇಂತಹ ಸಂದೇಶ ಕಳುಹಿಸುವ ಅಭ್ಯರ್ಥಿಗಳು ಅಥವಾ ಸಂದೇಶ ರವಾನೆ ಮಾಡುವಂತಹ ಮೊಬೈಲ್ ಕಂಪನಿಗಳ ವಿರುದ್ಧ ಕ್ರಮ ವಹಿಸಲು ಆಯೋಗವು ನಿರ್ದೇಶಿಸಿದೆ.
ಈ ಹಿನ್ನೆಲೆಯಲ್ಲಿ ಸಂದೇಶ ಕಳುಹಿಸುವ ಅಭ್ಯರ್ಥಿಗಳ ಅಥವಾ ಸಂದೇಶ ರವಾನೆ ಮಾಡುವ ಮೊಬೈಲ್ ಕಂಪನಿಗಳ ವಿರುದ್ಧ ಜಿಲ್ಲಾ ಚುನಾವಣಾಧಿಕಾರಿಗೆ ಮಾಹಿತಿ ನೀಡುವಂತೆ ಅಪರ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ತಿಳಿಸಿದ್ದಾರೆ.