ಕಾಂಗ್ರೆಸ್ಸಿಗರು ಮತದಾರರನ್ನು ದಾರಿತಪ್ಪಿಸುತ್ತಿದ್ದಾರೆ: ಆರೋಪ
ಕ.ಪ್ರ. ವಾರ್ತೆ , ಕನಕಪುರ , ಏ. 21
ಕನಕಪುರತಾಲೂಕು ಶಿವನಹಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯ ಹಳ್ಳಿಗಳಲ್ಲಿ ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ನಾರಾಯಣ ಗೌಡ ಹಾಗೂ ಜೆಡಿಎಸ್ ಮುಖಂಡರು ಅಭ್ಯರ್ಥಿ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಪರವಾಗಿ ಚುನಾವಣಾ ಪ್ರಚಾರ ನಡೆಸಿದರು.
ನಾರಾಯಣಗೌಡ ಮಾತನಾಡುತ್ತಾ, ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗರು ಬಡಜನರಿಗೆ ವಾಚು, ಸೀರೆ, ನೀರಿನ ಕ್ಯಾನ್ ಹಂಚುತ್ತಾ ಮತದಾರರನ್ನು ದಾರಿತಪ್ಪಿಸುತ್ತಿದ್ದಾರೆ. ಮರುವಿಂಗಡಣೆ ನಂತರ ಕನಕಪುರಕ್ಕೆ ಅಡಿಯಿರಿಸಿರುವ ಶಿವಕುಮಾರ್ ಅವರು ಗ್ರಾಮಗಳ ಅಭಿವೃದ್ಧಿಯ ಕಡೆಗೆ ಗಮನ ಹರಿಸಿಲ್ಲ, ಕ್ಷೇತ್ರದಲ್ಲಿ ಇಂದಿಗೂ ಅಸಂಖ್ಯಾತ ಸಮಸ್ಯೆಗಳಿವೆ. ಕೇವಲ ರೋಡ್ ಶೋ ಹಾಗೂ ಪ್ರಚಾರದಿಂದ ಅಭಿವೃದ್ಧಿಯಾಗುವುದಿಲ್ಲ ಎಂದು ಟೀಕಿಸಿದರು.
ಚುನಾವಣಾ ಪ್ರಚಾರದಲ್ಲಿ ಜೆಡಿಎಸ್ ಮುಖಂಡರಾದ ತುಂಗಣಿ ಪುಟ್ಟಸ್ವಾಮಿ, ಕೆ.ಪಿ.ಕುಮಾರ್, ಚಿನ್ನಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಬಸವಯ್ಯ, ತಾಪಂ ಮಾಜಿ ಸದಸ್ಯ ಹಲಗಪ್ಪ, ಸಿ.ಪ್ರಕಾಶ್, ಮಾಜಿ ಜಿಪಂ ಸದಸ್ಯೆ ಬೇಬಿ ಉಷಾಕುಮಾರಿ, ಸಿದ್ದಮರಿಗೌಡ, ಬಿ.ಎಸ್.ಗೌಡ, ಮೇಗಳ ಬೀದಿ ಮಹದೇವು ಪಾಲ್ಗೊಂಡಿದ್ದರು.