ಡಿಕೆಶಿ ಬಿರುಸಿನ ಪ್ರಚಾರ
ಕ.ಪ್ರ. ವಾರ್ತೆ, ಕನಕಪುರ , ಏ. 21
ಶಾಸಕ ಡಿ.ಕೆ.ಶಿವಕುಮಾರ್ ಪುನರಾಯ್ಕೆ ಬಯಸಿ ಶನಿವಾರ ಕನಕಪುರ ತಾಲೂಕಿನ ಕೋಡಿಹಳ್ಳಿ ಜಿಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು.
ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಹುಸೇನ್, ಮಹದೇಶ್, ಸಿದ್ಧವೀರ, ಮುನಿಹುಚ್ಚೇಗೌಡ, ರಮೇಶ್, ಶೆಟ್ಟಿಕೆರೆದೊಡ್ಡಿ ಚಂದ್ರು ಮತ್ತಿತರರು ಪಾಲ್ಗೊಂಡಿದ್ದರು. ಪ್ರತಿಯೊಂದು ಗ್ರಾಮದಲ್ಲಿಯೂ ಶಾಸಕರಿಗೆ ಅಭೂತಪೂರ್ವ ಸ್ವಾಗತ ದೊರೆಯಿತು. ಪ್ರಚಾರಕ್ಕೆ ಆಗಮಿಸಿದವರನ್ನು ಮೆರವಣಿಗೆಯಲ್ಲಿ ಕರೆತಂದು, ಪಟಾಕಿ ಸಿಡಿಸಿ ತಮಟೆ, ನಗಾರಿಗಳ ವಾದನದೊಂದಿಗೆ ಪಾದಯಾತ್ರೆ ನಡೆಯಿತು.
ಶಾಸಕ ಶಿವಕುಮಾರ್ ಮಾತನಾಡಿ, ನಾನು ಕನಕಪುರ ಕ್ಷೇತ್ರದಲ್ಲಿ ನಡೆಸಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಬೆಂಬಲಿಸಿ, ಇನ್ನೂ ಕ್ಷೇತ್ರಕ್ಕೆ ಮಾಡಬೇಕಾದ ಕಾರ್ಯಗಳು ಬಹಳಷ್ಟಿವೆ. ಜನರ ನಂಬುಗೆಗೆ ಮೋಸ ಮಾಡುವ ರೀತಿ ವರ್ತಿಸುವುದಿಲ್ಲ. ಯಾವುದೇ ಸುಳ್ಳು ಆಶ್ವಾಸನೆಗಳನ್ನು ನೀಡುವುದಿಲ್ಲ, ಮಾತಿಗಿಂತ ಕೃತಿಯಲ್ಲಿ ನಂಬಿಕೆ ಇರಿಸಿದವನು ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಕೋಡಿಹಳ್ಳಿ ಜಿಪಂ ವ್ಯಾಪ್ತಿಯ ರಾಂಪುರದೊಡ್ಡಿ, ಇಂದಿರಾನಗರ, ಗರಳಾಪುರ, ಅರಕೆರೆ, ನಾಯ್ಕಲ್ದೊಡ್ಡಿ, ದೊಡ್ಡಗುಳಿ, ಹಲಸೂರು, ಹಂಚುಗಳಿ, ಕೆಬ್ಬರೆ, ಬನ್ನಹಳ್ಳಿ, ಅಂತೇಗೌಡನದೊಡ್ಡಿ, ಚಿಕ್ಕಬ್ಬಳ್ಳಿ,ಅರಳೀಮರದೊಡ್ಡಿ, ದೊಡ್ಡ ಕಬ್ಬಳ್ಳಿ,ಹೊಸದೊಡ್ಡಿ, ಚನ್ನಸಂದ್ರ ಮೊದಲಾದ ಐವತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.