ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಡಿಕೆಶಿ ಬಿರುಸಿನ ಪ್ರಚಾರ

Vishwanath S
Updated On : 22 Apr 2013, 12:05 pm

ಕ.ಪ್ರ. ವಾರ್ತೆ , ಕನಕಪುರ ,  ಏ. 21
ಶಾಸಕ ಡಿ.ಕೆ.ಶಿವಕುಮಾರ್ ಪುನರಾಯ್ಕೆ ಬಯಸಿ ಕನಕಪುರ ತಾಲೂಕಿನ ಕೋಡಿಹಳ್ಳಿ ಜಿಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು.
ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಹುಸೇನ್, ಮಹದೇಶ್, ಸಿದ್ಧವೀರ, ಮುನಿಹುಚ್ಚೇಗೌಡ, ರಮೇಶ್, ಶೆಟ್ಟಿಕೆರೆದೊಡ್ಡಿ ಚಂದ್ರು ಮತ್ತಿತರರು ಪಾಲ್ಗೊಂಡಿದ್ದರು. ಪ್ರತಿಯೊಂದು ಗ್ರಾಮದಲ್ಲಿಯೂ ಶಾಸಕರಿಗೆ ಅಭೂತಪೂರ್ವ ಸ್ವಾಗತ ದೊರೆಯಿತು. ಪ್ರಚಾರಕ್ಕೆ ಆಗಮಿಸಿದವರನ್ನು ಮೆರವಣಿಗೆಯಲ್ಲಿ ಕರೆತಂದು, ಪಟಾಕಿ ಸಿಡಿಸಿ ತಮಟೆ, ನಗಾರಿಗಳ ವಾದನದೊಂದಿಗೆ ಪಾದಯಾತ್ರೆ ನಡೆಯಿತು.
ಶಾಸಕ ಶಿವಕುಮಾರ್ ಮಾತನಾಡಿ, ನಾನು ಕನಕಪುರ ಕ್ಷೇತ್ರದಲ್ಲಿ ನಡೆಸಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಬೆಂಬಲಿಸಿ, ಇನ್ನೂ ಕ್ಷೇತ್ರಕ್ಕೆ ಮಾಡಬೇಕಾದ ಕಾರ್ಯಗಳು ಬಹಳಷ್ಟಿವೆ. ಜನರ ನಂಬುಗೆಗೆ ಮೋಸ ಮಾಡುವ ರೀತಿ ವರ್ತಿಸುವುದಿಲ್ಲ.  ಯಾವುದೇ ಸುಳ್ಳು ಆಶ್ವಾಸನೆಗಳನ್ನು ನೀಡುವುದಿಲ್ಲ, ಮಾತಿಗಿಂತ ಕೃತಿಯಲ್ಲಿ ನಂಬಿಕೆ ಇರಿಸಿದವನು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement